Friday, May 15, 2026
Google search engine
Homeರಾಜ್ಯಧಾರವಾಡದಲ್ಲಿ 5 ಕೋಟಿ ಬ್ಯಾಂಕ್ ದರೋಡೆ ಜಸ್ಟ್ ಮಿಸ್!

ಧಾರವಾಡದಲ್ಲಿ 5 ಕೋಟಿ ಬ್ಯಾಂಕ್ ದರೋಡೆ ಜಸ್ಟ್ ಮಿಸ್!

ಬ್ಯಾಂಕ್ ಗೆ ನುಗ್ಗಿ 5 ಕೋಟಿ ರೂ. ದರೋಡೆಗೆ ನಡೆದಯತ್ನವೊಂದು ವಿಫಲವಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ‌ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ರ಻ತ್ರಿ ಶಿರೂರ ಗ್ರಾಮದಲ್ಲಿರುವ ಎಸ್​ಬಿಐ ಬ್ಯಾಂಕ್ ದರೋಡೆಗೆ ಖದೀಮರು ಯತ್ನಿಸಿದ್ದಾರೆ.

ಬ್ಯಾಂಕ್​ನಲ್ಲಿ 5 ಕೋಟಿ ಮೌಲ್ಯದ ಬಂಗಾರ ಹಾಗೂ 11 ಲಕ್ಷ ನಗದು ಹಣ ಇತ್ತು. ಖದೀಮರು ಬ್ಯಾಂಕ್ ಹಿಂದಿನ ಗೋಡೆ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಸ್ವಲ್ಪ ಗೋಡೆ ಒಡೆದ ನಂತರ ಶಬ್ದ ಕೇಳಿ ಬಂದ ಕಾರಣ ಸ್ಥಳದಿಂದ ಪರಾರಿಯಾಗಿದ್ದಾರೆ.

ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನವಲಗುಂದ ಪೊಲೀಸರು, ಶಾನದಳ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖದೀಮರ ಬಂಧನಕ್ಕೆ ಶೋಧ ನಡೆಯುತ್ತಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments