ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಸಿಡಿಸಿದ ಶತಕಗಳ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಪುದುಚೇರಿ ತಂಡಕ್ಕೆ 354 ರನ್ ಕಠಿಣ ಗುರಿ ಒಡ್ಡಿದೆ.
ಅಹಮದಾಬಾದ್ ನಲ್ಲಿ ಬುಧವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿದೆ.
ಭರ್ಜರಿ ಫಾರ್ಮ್ ನಲ್ಲಿರುವ ಆರ್ ಸಿಬಿ ಆಟಗಾರರಾದ ದೇವದತ್ ಪಡಿಕ್ಕಲ್ ತಮ್ತು ಮಯಾಂಕ್ ಅಗರ್ವಾಲ್ ವೈಯಕ್ತಿಕ ಶತಕಗಳನ್ನು ಗಳಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 228 ರನ್ ಗಳ ಜೊತೆಯಾಟದಿಂದ ಬೃಹತ್ ಮೊತ್ತದ ಜೊತೆಯಾಟ ನಿಭಾಯಿಸಿದರು.
ದೇವದತ್ ಪಡಿಕ್ಕಲ್ 116 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 315 ರನ್ ಬಾರಿಸಿ ಔಟಾದರು. ಇದು ಪ್ರಸಕ್ತ ಟೂರ್ನಿಯಲ್ಲಿ ಪಡಿಕ್ಕಲ್ ಗಳಿಸಿದ ಮೂರನೇ ಶತಕವಾಗಿದೆ.
ಮಯಂಕ್ ಅಗರ್ವಾಲ್ 124 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 132 ರನ್ ಗಳಿಸಿ ನಿರ್ಗಮಿಸಿದರು. ಇದು ಮಯಾಂಕ್ ಗೆ 2ನೇ ಶತಕವಾಗಿದೆ.
ನಂತರ ಬಂದ ಕರುಣ್ ನಾಯರ್ ಕೂಡ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾದರು. ಕರುಣ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 62 ರನ್ ಸಿಡಿಸಿ ಔಟಾಗದೇ ಉಳಿದರೆ ರವಿಚಂದ್ರನ್ 21 ಮತ್ತು ಅಭಿನವ್ ಮನೋಹರ್ 6 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 21 ರನ್ ಬಾರಿಸಿ ತಂಡದ ಮೊತ್ತ 350ರ ಗಡಿ ದಾಟಿಸಿದರು.



