Tuesday, May 19, 2026
Google search engine
Homeದೇಶವೆನಿಜುವೆಲಾ ಮಾದರಿ ಟ್ರಂಪ್ ನಮ್ಮ ಪ್ರಧಾನಿಯನ್ನು ಕಿಡ್ನಾಪ್ ಮಾಡ್ತಾರಾ: ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ

ವೆನಿಜುವೆಲಾ ಮಾದರಿ ಟ್ರಂಪ್ ನಮ್ಮ ಪ್ರಧಾನಿಯನ್ನು ಕಿಡ್ನಾಪ್ ಮಾಡ್ತಾರಾ: ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ

ವೆನಿಜುವೆಲಾ ಮಾದರಿ ನಮ್ಮ ದೇಶಕ್ಕೂ ಬರುವುದಿಲ್ಲ ಎಂಬುದು ಏನು ಗ್ಯಾರಂಟಿ. ನಮ್ಮ ಪ್ರಧಾನಿಯನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಹರಿಸುತ್ತಾರೆಯೇ ಎಂದು ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹಾಣ್ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

ವೆನಿಜುವೆಲಾ ಮುಖಂಡ ನಿಕೊಲಸ್ ಮಡೂರು ಅವರನ್ನು ಅಮೆರಿಕ ಸೇನೆ ಅಪಹರಿಸಿತ್ತು. ಇದೇ ಮಾದರಿ ನಮ್ಮ ಪ್ರಧಾನಿಯನ್ನೂ ಕಿಡ್ನಾಪ್ ಮಾಡುತ್ತಾರಾ ಎಂಬ ಪೃಥ್ವಿರಾಜ್ ಚೌಹಾಣ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹಾಸ್ಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪೃಥ್ವಿರಾಜ್ ಚೌಹಾಣ್ ಹೇಳಿಕೆಗೆ ಜಮ್ಮು ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿ ಕೂಡ ಪ್ರತಿಕ್ರಿಯಿಸಿದ್ದು, ಇಂತಹ ಹೇಳಿಕೆಯಿಂದ ಇಡೀ ದೇಶವೇ ಮುಜುಗರಕ್ಕೆ ಒಳಗಾಗಿದೆ ಎಂದಿದ್ದಾರೆ.

ಸತ್ತ ಮೆದುಳು, ಅಸುರಕ್ಷಿತ, ಮೂರ್ಖ ಮುಂತಾದ ಹಲವು ರೀತಿಯ ಕಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಬಂದಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಚೌಹಾಣ್ ಈ ರೀತಿಯ ಹೇಳಿಕೆ ನಗೆಪಾಟಿಲಿಗೆ ಈಡಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments