Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ದೇಶ

ಗ್ರಾಹಕರಿಗೆ ಸಿಹಿಸುದ್ದಿ: ದಿಢೀರ್ ಕುಸಿದ ಚಿನ್ನ, ಬೆಳ್ಳಿ ದರ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 26 ವೀಕ್ಷಣೆಗಳು
gold silver

ನವದೆಹಲಿ: ಸತತ ಐದು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನ- ಬೆಳ್ಳಿ ದರ ಶುಕ್ರವಾರ ಕುಸಿತ ದಾಖಲಿಸಿದೆ. ಇದರಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 4,027 ರೂ. ಇಳಿಕೆ ಕಂಡಿದೆ. ಇದರಿಂದ ಕೆಜಿಗೆ ಬೆಳ್ಳಿ ದರ 2,87,550 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, 1,42,601 ರೂ. ಇಳಿಕೆಯಾಗಿದೆ.

ಎಂಸಿಎಕ್ಸ್​ ಪ್ರಕಾರ, ಮಾರ್ಚ್​ ವಿತರಣೆಯ ಬೆಳ್ಳಿ ಬೆಲೆಯಲ್ಲಿ 4,027 ರೂ ಅಂದರೆ ಶೇ.1.38ರಷ್ಟು ಇಳಿಕೆ ಮೂಲಕ ಕೆಜಿಗೆ 2,87,550 ರೂ ದಾಖಲಾಗಿದ್ದು, 9,890 ಲಾಟ್​ಗಳ ವಹಿವಾಟು ನಡೆಸಿದೆ. ಹಿಂದಿನ ದಿನವಾದ ಗುರುವಾರ ಬೆಳ್ಳಿ ಭಾರಿ ಏರಿಕೆ ಕಾಣುವ ಮೂಲಕ ಕೆಜಿಗೆ 2,92,960 ಸರ್ವಕಾಲಿಕ ದಾಖಲೆ ಬರೆದಿತ್ತು. 3 ಲಕ್ಷ ತಲುಪುವ ಮುನ್ಸೂಚನೆ ನೀಡಿತ್ತು.

ಗುರುವಾರ ಮಹಾರಾಷ್ಟ್ರದಲ್ಲಿ ನಾಗರಿಕ ಚುನಾವಣೆಗಳ ಕಾರಣ ಬೆಳಗಿನ ಅವಧಿಯಲ್ಲಿ ಎಂಸಿಎಕ್ಸ್‌ನಲ್ಲಿ ವ್ಯಾಪಾರ ಸ್ಥಗಿತಗೊಂಡು ಸಂಜೆಯ ಅವಧಿಯಲ್ಲಿ ವಹಿವಾಟು ಪುನಾರಂಭವಾಗಿತ್ತು. ಶುಕ್ರವಾರ ಚಿನ್ನದ ಬೆಲೆಯಲ್ಲಿ ಶೇ. 0.36 ರಷ್ಟು ಇಳಿಕೆ ಕಾಣುವ ಮೂಲಕ 1,42,601 ರೂ.ಗೆ ತಲುಪಿದೆ.

ಇರಾನ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಟ್​ ಮೃದು ನಿಲುವು ತಾಳಿದ್ದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಗೆ ಕಾರಣ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಸರಕುಗಳ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಏಷ್ಯಾದ ವಹಿವಾಟಿನ ಸಮಯದಲ್ಲಿ ಬೆಳ್ಳಿ ಮತ್ತು ಚಿನ್ನ ಎರಡೂ ಸುಧಾರಿಸಿದವು. ಕಾಮೆಕ್ಸ್‌ನಲ್ಲಿ, ಮಾರ್ಚ್ ಒಪ್ಪಂದದ ಬೆಳ್ಳಿ ಪ್ರತಿ ಔನ್ಸ್‌ಗೆ 1.93 ಡಾಲರ್ ಅಥವಾ ಶೇಕಡಾ 2.10 ರಷ್ಟು ಇಳಿಕೆ ಕಾಣುವ ಮೂಲಕ 90.41 ಡಾಲರ್‌ಗೆ ತಲುಪಿತು. ಬುಧವಾರ ಬೆಳ್ಳ ಔನ್ಸ್‌ಗೆ 93.56 ಡಾಲರ್‌ಗೆ ಏರಿಕೆ ಕಂಡಿತ್ತು.

ಫೆಬ್ರವರಿ ವಿತರಣೆಯ ಚಿನ್ನದ ಫ್ಯೂಚರ್‌ಗಳು ಸಹ ಪ್ರತಿ ಔನ್ಸ್‌ಗೆ 21.9 ಡಾಲರ್ ಅಥವಾ ಶೇಕಡಾ 0.47 ರಷ್ಟು ಕುಸಿತ ಕಂಡು 4,601.8 ಡಾಲರ್‌ಗೆ ತಲುಪಿದೆ. ಜನವರಿ 14ರಂದು ಚಿನ್ನ ಸಾರ್ವಕಾಲಿಕ ದಾಖಲೆ ಕಂಡಿದ್ದು ಔನ್ಸ್‌ಗೆ 4,650.50 ಡಾಲರ್‌ಗೆ ಮುಟ್ಟಿತ್ತು.

ಅಮೆರಿಕದ ಇತ್ತೀಚಿನ ಸ್ಥೂಲ ಆರ್ಥಿಕ ದತ್ತಾಂಶವು ವರ್ಷದ ಮೊದಲಾರ್ಧದಲ್ಲಿ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳನ್ನು ತಡೆಹಿಡಿದಿದೆ. ಇದು ಡಾಲರ್ ಸೂಚ್ಯಂಕವನ್ನು ಗರಿಷ್ಠ ಮಟ್ಟಕ್ಕೆ ತಳ್ಳಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment