ಶಿಕಾರಿಪುರ ತಾಲೂಕಿನಲ್ಲಿ ನಾಲ್ಕು ಹೊಸ ಪ್ರಕರಣ ಪತ್ತೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ ಡಿ ವೈರಸ್ (ಮಂಗನ ಕಾಯಿಲೆ) ವೇಗವಾಗಿ ಹರಡುವ ಭೀತಿ ಎದುರಾಗಿದೆ.
ಹೊಸನಗರ ತಾಲೂಕಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ನಾಲ್ಕು ಜನರಲ್ಲಿ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ಶಿಕಾರಿಪುರ ತಾಲೂಕಿನ ಬನ್ನೂರು, ಅಣ್ಣಾಪುರ ಗ್ರಾಮದ ನಾಲ್ವರಲ್ಲಿ ಕೆಎಫ್ ಡಿ ಕಾಣಿಸಿಕೊಂಡಿದೆ.
ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೂಲಿ ಕಾರ್ಮಿಕರಲ್ಲಿ ಕೆಎಫ್ ಡಿ ಕಾಣಿಸಿಕೊಂಡಿರುವುದು ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ.



