Wednesday, June 24, 2026
Google search engine
Homeಕ್ರೀಡೆಸಿಡಿದ ಇಶಾನ್-‌ ಸೂರ್ಯ: ಕಿವೀಸ್‌ ವಿರುದ್ಧ ಭಾರತ ಜಯದ ದಾಖಲೆ

ಸಿಡಿದ ಇಶಾನ್-‌ ಸೂರ್ಯ: ಕಿವೀಸ್‌ ವಿರುದ್ಧ ಭಾರತ ಜಯದ ದಾಖಲೆ

ಮಧ್ಯಮ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಸಿಡಿಲಬ್ಬರದ ಆಟದಿಂದ ಭಾರತ ತಂಡ 7 ವಿಕೆಟ್‌ ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿ ಟಿ-20 ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದೆ.

ರಾಯ್‌ ಪುರದಲ್ಲಿ ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 6 ವಿಕೆಟ್‌ ಕಳೆದುಕೊಂಡು 208 ರನ್‌ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 15.2 ಓವರ್‌ ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ 200ಕ್ಕಿಂತ ಅಧಿಕ ಮೊತ್ತವನ್ನು ಅತ್ಯಂತ ವೇಗವಾಗಿ ಯಶಸ್ವಿಯಾಗಿ ಬೆಂಬತ್ತಿದ ದಾಖಲೆ ಬರೆಯಿತು.

ಕಠಿಣ ಗುರಿ ಬೆಂಬತ್ತಿದ ಭಾರತ ತಂಡ ಆರಂಭದಲ್ಲೇ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಪಂದ್ಯದ ಹೀರೋ ಅಭಿಷೇಕ್‌ ಶರ್ಮ (0) ಮತ್ತು ಸಂಜು ಸ್ಯಾಮ್ಸನ್‌ (6) ವಿಫಲರಾದರು. ಆದರೆ ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಇಶಾನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಪಂದ್ಯದ ದಿಕ್ಕನ್ನೇ ಬದಲಿಸಿದರು.

ಇಶಾನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಮೂರನೇ ವಿಕೆಟ್‌ ಗೆ 55 ಎಸೆತಗಳಲ್ಲಿ 122 ರನ್‌ ಗಳ ಭರ್ಜರಿ ಜೊತೆಯಾಟ ನಿಭಾಯಿಸಿದರು. ಇಶಾನ್‌ ಕಿಶನ್‌ 32 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ ಸಹಾಯದಿಂದ 72 ರನ್‌ ಸಿಡಿಸಿ ನಿರ್ಗಮಿಸಿದರು.

ಮತ್ತೊಂದೆಡೆ ರನ್‌ ಗಳಿಸಲು ಪರದಾಡುತ್ತಿದ್ದ ಸೂರ್ಯಕುಮಾರ್‌ ನೆಲೆ ಕಂಡುಕೊಳ್ಳುತ್ತಲೇ ಅಬ್ಬರಿಸಲು ಆರಂಭಿಸಿದರು. ಸೂರ್ಯಕುಮಾರ್‌ 37 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ ಸಹಾಯದಿಂದ 82 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಅಲ್ಲದೇ ಶಿವಂ ದುಬೆ 4ನೇ ವಿಕೆಟ್‌ ಗೆ 81 ರನ್‌ ಜೊತೆಯಾಟದಲ್ಲಿ ಪಾಲ್ಗೊಂಡರು. ದುಬೆ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿ 36 ರನ್‌ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡದ ಪರ ಒಬ್ಬರೂ ಅರ್ಧಶತಕ ಗಳಿಸದೇ ಇದ್ದರೂ ನಿಯಮಿತವಾಗಿ ವಿಕೆಟ್‌ ಕಳೆದುಕೊಂಡರೂ ಎಲ್ಲರ ಅಲ್ಪಸ್ವಲ್ಪ ಕಾಣಿಕೆಯೊಂದಿಗೆ ಬೃಹತ್‌ ಮೊತ್ತ ಪೇರಿಸಲು ನೆರವಾದರು.
ರಚಿನ್ ರವೀಂದ್ರ (44), ನಾಯಕ ಮಿಚೆಲ್‌ ಸ್ಯಾಂಟ್ನರ್‌ (ಅಜೇಯ 47) ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments