Monday, July 6, 2026
Google search engine
Homeಕ್ರೀಡೆಭಾರತಕ್ಕೆ ಅತೀ ವೇಗದ ಗೆಲುವಿನ ಅಭಿಷೇಕ, 3-0ಯಿಂದ ಸರಣಿ ಜಯ

ಭಾರತಕ್ಕೆ ಅತೀ ವೇಗದ ಗೆಲುವಿನ ಅಭಿಷೇಕ, 3-0ಯಿಂದ ಸರಣಿ ಜಯ

ಆರಂಭಿಕ ಅಭಿಷೇಕ್‌ ಶರ್ಮ ಸಿಡಿಸಿದ ಅತೀ ವೇಗದ ಅರ್ಧಶತಕ ಹಾಗೂ ಸೂರ್ಯಕುಮಾರ್‌ ಗಳಿಸಿದ ಸತತ 2ನೇ ಅರ್ಧಶತಕದ ಸಹಾಯದಿಂದ ಭಾರತ ತಂಡ 10 ಓವರ್‌ ಬಾಕಿ ಇರುವಂತೆಯೇ 8 ವಿಕೆಟ್‌ ಗಳಿಂದ ಗೆದ್ದು 5 ಪಂದ್ಯಗಳ ಟಿ-20 ಸರಣಿಯಲ್ಲಿ 3-0ಯಿಂದ ಗೆದ್ದು ಬೀಗಿದೆ.

ಗುವಾಹತಿಯಲ್ಲಿ ಭಾನುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ 20 ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 153 ರನ್‌ ಸಂಪಾದಿಸಿತು. ಸುಲಭ ಗುರಿ ಬೆಂಬತ್ತಿದ ಭಾರತ ತಂಡ 20 ಓವರ್‌ ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಭಾರತ ತಂಡ ಖಾತೆ ತೆರೆಯುವ ಮುನ್ನವೇ ಸಂಜು ಸ್ಯಾಮ್ಸನ್‌ (0) ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಒಳಗಾದರೂ ಅಭಿಷೇಕ್‌ ಶರ್ಮ ಮತ್ತು ಇಶಾನ್‌ ಕಿಶನ್‌ (28) ಎರಡನೇ ವಿಕೆಟ್‌ ಗೆ 53 ರನ್‌ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ನಂತರ ಅಭಿಷೇಕ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಸಿಡಿಲಬ್ಬರದ ಆಟದಿಂದ ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು. ಅಭಿಷೇಕ್‌ ಶರ್ಮ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ ಸಹಾಯದಿಂದ 68 ರನ್‌ ಚಚ್ಚಿದರೆ, ಸೂರ್ಯಕುಮಾರ್‌ ೨೬ ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡ 57 ರನ್‌ ಬಾರಿಸಿದರು.

ಅಭಿಷೇಕ್‌ ಶರ್ಮ 14 ಎಸೆತಗಳಲ್ಲಿ ಅರ್ದಶತಕ ಪೂರೈಸಿ ಭಾರತದ ಪರ ಎರಡನೇ ಅತೀ ವೇಗದ ಅರ್ಧಶತಕ ಗಳಿಸಿದರು. ಇದಕ್ಕೂ ಮುನ್ನ ಹಾರ್ದಿಕ್‌ ಪಾಂಡ್ಯ 16 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ, 2007ರಲ್ಲಿ ಇಂಗ್ಲೆಂಡ್‌ ವಿರುದ್ಧ 12 ಎಸೆತಗಳಲ್ಲಿ ಯುವರಾಜ್‌ ಸಿಂಗ್ ಗಳಿಸಿರುವ ಅರ್ಧಶತಕ ಈಗಲೂ ಅಗ್ರಸ್ಥಾನದಲ್ಲಿದೆ.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ ಜಸ್‌ ಪ್ರೀತ್‌ ಬುಮ್ರಾ ನೇತೃತ್ವದಲ್ಲಿ ಮಧ್ಯಮ ವೇಗಿಗಳ ದಾಳಿಗೆ ನಲುಗಿ ಅಲ್ಪ ಮೊತ್ತಕ್ಕೆ ಕುಸಿಯಿತು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಫಿಲಿಪ್ಸ್‌ (48) ಮತ್ತು ಮಾರ್ಕ್‌ ಚಾಂಪನ್‌ (32) ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಭಾರತದ ಜಸ್‌ ಪ್ರೀತ್‌ ಬುಮ್ರಾ (3), ಹಾರ್ದಿಕ್‌ ಪಾಂಡ್ಯ ಮತ್ತು ರವಿ ಬಿಶ್ನೋಯಿ ತಲಾ 2 ವಿಕೆಟ್‌ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments