ಖಾಸಗಿ ವಾಣಿಜ್ಯ ವಿಮಾನವೊಂದು ಶೋರೂಂ ಮೇಲೆ ಪತನಗೊಂಡ ಪರಿಣಾಮ 7 ಮಂದಿ ಮೃತಪಟ್ಟ ದಾರುಣ ಘಟನೆ ಅಮೆರಿಕದ ಮೈನೆಯ ಬಂಗೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಬೊಂಬಾರೈಡರ್ ಚಾಲೆಂಜರ್ಸ್ ೬೦೦ ವಿಮಾನದಲ್ಲಿ ಪೈಲೆಟ್ ಸೇರಿದಂತೆ 8 ಮಂದಿ ಇದ್ದರು. ಭಾರೀ ಚಳಿಗಾಳಿ ನಡುವೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದ್ದು, ಶೋ ರೂಂ ಮೇಲೆ ಬಿದ್ದಿದೆ.
ಬೋಸ್ಟನ್ ನಿಂದ 200 ಕಿ.ಮೀ. ದೂರದಲ್ಲಿರುವ ಈ ವಿಮಾನ ನಿಲ್ದಾಣ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದ್ದು, ದುರಂತ ಬೆನ್ನಲ್ಲೇ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ.
ಭಾರೀ ಪ್ರಮಾಣದಲ್ಲಿ ಹಿಮಪಾತ ಆಗುತ್ತಿರುವುದರಿಂದ ಜನರು ಹೊರಗೆ ಬಾರದಂತೆ ಹಾಗೂ ಹೊರಗೆ ಸಂಚರಿಸದಂತೆ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ ವಿಮಾನ ಸಂಚಾರಕೆಕ ಯತ್ನಿಸಿದ್ದರಿಂದ ಈ ದುರಂತ ಸಂಭವಿಸಿದೆ.
ವಿಮಾನದಲ್ಲಿದ್ದ ೭ ಮಂದಿ ಮೃತಪಟ್ಟಿದ್ದು, ಪೈಲೆಟ್ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ. ಭಾನುವಾರ ರಾತ್ರಿ 7.45ಕ್ಕೆ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



