ಮೈಸೂರು: ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಯುವರಾಜ ಎಂದೇ ಖ್ಯಾತಿ ಪಡೆದು ಪ್ರಮುಖ ಆಕರ್ಷಣೆಯಾಗಿದ್ದ ಸುಮಾರು 25 ವರ್ಷ ವಯಸ್ಸಿನ ಗಂಡು ಜಿರಾಫೆ ಬುಧವಾರ ಬೆಳಿಗ್ಗೆ ಮೃತಪಟ್ಟಿದೆ.
ಸುಮಾರು 25 ವರ್ಷ ವಯಸ್ಸಿನ ಗಂಡು ಜಿರಾಫೆ “ಯುವರಾಜ ವೃದ್ದಾಪ್ಯದ ಕಾರಣ ಬುಧವಾರ ಬೆಳಗ್ಗೆ 10.30ರ ಸಮಯದಲ್ಲಿ ನಿಧನ ಹೊಂದಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
1987ರಲ್ಲಿ ಜರ್ಮನಿಯಿಂದ ತಂದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ ೨೦೦೧ರ ಡಿ.7ರಲ್ಲಿ ಜನಿಸಿದ ಯುವರಾಜ ಜಿರಾಫೆಯು ಜನಿಸಿದ ನಂತರ ಪ್ರಾಣಿಪಾಲಕರ ಕೈ ಆರೈಕೆಯಲ್ಲಿ ಬೆಳೆದ ಹಾಗೂ ಮೃಗಾಲಯದಲ್ಲಿ ಹೆಚ್ಚು ವರ್ಷ ಅಂದರೆ 25 ವರ್ಷಗಳ ಕಾಲ ಬದುಕಿದ ಜಿರಾಫೆಯಾಗಿದೆ.
ಹನಿ ಮತ್ತು ಹೆನ್ರಿ ಜಿರಾಫೆಗಳಿಗೆ ಜನಿಸಿದ ಕೃಷ್ಣರಾಜ. ಚಾಮರಾಜ, ನರಸಿಂಹರಾಜ ಮತ್ತು ಯುವರಾಜ ಜಿರಾಫೆಗಳಲ್ಲಿ ಈವರೆಗೆ ಬದುಕಿದ ಜಿರಾಫೆ ಯುವರಾಜ ಜಿರಾಫೆಯಾಗಿದ್ದು, ಜಿರಾಫೆಯ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದ್ದು, ಮೈಸೂರು ಮೃಗಾಲಯವು ತೀವ್ರ ಸಂತಾಪವನ್ನು ಸೂಚಿಸಿದೆ ಎಂದು ತಿಳಿಸಿದೆ.



