Sunday, June 28, 2026
Google search engine
Homeದೇಶಗ್ರಾಹಕರಿಗೆ ಸಿಹಿಸುದ್ದಿ: ಒಂದೇ ದಿನದಲ್ಲಿ 1,00,000 ರೂ. ಪಾತಾಳಕ್ಕೆ ಕುಸಿತ ಬೆಳ್ಳಿ ದರ!

ಗ್ರಾಹಕರಿಗೆ ಸಿಹಿಸುದ್ದಿ: ಒಂದೇ ದಿನದಲ್ಲಿ 1,00,000 ರೂ. ಪಾತಾಳಕ್ಕೆ ಕುಸಿತ ಬೆಳ್ಳಿ ದರ!

ಸತತವಾಗಿ ಗಗನಕ್ಕೇರಿದ್ದ ಬೆಳ್ಳಿ ದರ ಶನಿವಾರ ಒಂದೇ ದಿನ ಶೇ.25ರಷ್ಟು ಅಂದರೆ ಕೆಜಿಗೆ 1,00,000 ಲಕ್ಷ ರೂ.ನಷ್ಟು ಭಾರೀ ಕುಸಿತ ಕಂಡಿದೆ.

ಎಂಸಿಎಕ್ಸ್ ನಲ್ಲಿ ಶನಿವಾರ ಒಂದೇ ದಿನದಲ್ಲಿ ಬೆಳ್ಳಿ ದರ ಶೇ.25ರಷ್ಟು ಕುಸಿತ ಕಂಡಿದೆ. ಬೆಳ್ಳಿ ದರ ದಿಢೀರ್ ಕುಸಿತದಿಂದ ಹೂಡಿಕೆದಾರರು ಬೆಚ್ಚಿಬಿದ್ದರೆ, ಗ್ರಾಹಕರು ಸಂತಸಗೊಂಡಿದ್ದಾರೆ.

ಬೆಳ್ಳಿ ದರ ಕೆಜಿಗೆ 4 ಲಕ್ಷ ರೂ. ಸಮೀಪಿಸಿದ್ದ ಬೆಳ್ಳಿ 4 ಲಕ್ಷ ಗಡಿ ದಾಟುವ ನಿರೀಕ್ಷೆ ಇತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿ 3 ಲಕ್ಷ ರೂ.ಗಿಂತ ಕಡಿಮೆ ಮೊತ್ತಕ್ಕೆ ಪಾತಾಳ ಕಂಡಿದೆ. ಈ ಮೂಲಕ ಬೆಳ್ಳಿ ಇತಿಹಾಸದಲ್ಲೇ ಮೊದಲ ಬಾರಿ ಒಂದೇ ದಿನದಲ್ಲಿ ದಾಖಲೆ ಮೊತ್ತದ ಕುಸಿತ ದಾಖಲಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪಾಟ್ ಬೆಳ್ಳಿಯು ದಿನಗಳ ಹಿಂದೆ 121.60 ಡಾಲರ್‌ ಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಟ್ರಾಯ್ ಔನ್ಸ್‌ಗೆ ಶೇ. 28 ರಷ್ಟು ಕುಸಿದು ಸುಮಾರು 85 ಡಾಲರ್‌ಗಳಿಗೆ ತಲುಪಿತು.

ಕುಸಿತಕ್ಕೆ ಕಾರಣವೇನು?

ಬೆಳ್ಳಿ ದರ ಕುಸಿತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಇದರಿಂದ ಕೇಂದ್ರ ಬ್ಯಾಂಕ್ ಸ್ವಾತಂತ್ರ್ಯದ ಬಗ್ಗೆ ಜನರ ಆತಂಕ ಕಡಿಮೆ ಆಗಿದ್ದು, ಸ್ಥಿರ ಬೆಳವಣಿಗೆ ನಿರೀಕ್ಷಿಸಿದ್ದಾರೆ.

ಟ್ರಂಪ್ ಈ ನಡೆಯಿಂದ ಕುಸಿತ ಕಂಡಿದ್ದ ಯುಎಸ್ ಡಾಲರ್ ಕೂಡ ಚೇತರಿಕೆ ಕಂಡಿದೆ. ಕಳೆದ ವರ್ಷ ಮೇ ತಿಂಗಳ ನಂತರ ಡಾಲರ್ ಸೂಚ್ಯಂಕವು ಒಂದೇ ದಿನದಲ್ಲಿ ಅತಿ ದೊಡ್ಡ ಜಿಗಿತವನ್ನು ದಾಖಲಿಸಿದ್ದು, 97 ಅಂಕವನ್ನು ದಾಟಿದೆ.

ಬಲವಾದ ಡಾಲರ್ ಸಾಮಾನ್ಯವಾಗಿ ಅಮೂಲ್ಯ ಲೋಹಗಳ ಮೇಲೆ ಒತ್ತಡ ಹೇರುತ್ತದೆ, ಯುಎಸ್ ಅಲ್ಲದ ಖರೀದಿದಾರರಿಗೆ ಅವುಗಳನ್ನು ದುಬಾರಿಯನ್ನಾಗಿ ಮಾಡುತ್ತದೆ ಮತ್ತು ಬಡ್ಡಿ ನೀಡುವ ಸ್ವತ್ತುಗಳ ವಿರುದ್ಧ ಅವುಗಳ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ.

ಇದೇ ವೇಳೆ ಚಿನ್ನದ ದರವೂ ಕುಸಿತ ದಾಖಲಿಸಿದ್ದು, ಕಳೆದ ಫೆಬ್ರವರಿ ಫ್ಯೂಚರ್ ಗಳು ಶೆ.12ರಷ್ಟು ಕುಸಿತ ಕಂಡಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ 1,50,440 ರೂ.ಗೆ ಇಳಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments