Saturday, July 11, 2026
Google search engine
Homeಕಾನೂನುಹೆಚ್.ಡಿ. ರೇವಣ್ಣಗೆ ಸಂಕಷ್ಟ: ಕಿಡ್ನಾಪ್‌ ಪ್ರಕರಣ ದೋಷಾರೋಪ ದಾಖಲು ತಡೆಯಾಜ್ಞೆ ತೆರವು

ಹೆಚ್.ಡಿ. ರೇವಣ್ಣಗೆ ಸಂಕಷ್ಟ: ಕಿಡ್ನಾಪ್‌ ಪ್ರಕರಣ ದೋಷಾರೋಪ ದಾಖಲು ತಡೆಯಾಜ್ಞೆ ತೆರವು

ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಹೆಚ್.ಡಿ. ರೇವಣ್ಣ ವಿರುದ್ಧ ಕಿಡ್ನಾಪ್‌ ಪ್ರಕರಣದಲ್ಲಿ ದೋಷಾರೋಪ ದಾಖಲಿಸಲು ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್‌ ತೆರವುಗೊಳಿಸಿದೆ.

ಮೈಸೂರು ಜಿಲ್ಲೆಯ ಕೆ ಆರ್ ನಗರದ ಮಹಿಳೆ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ರದ್ದು ಕೋರಿ ಹೆಚ್ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಹೆಚ್‌.ಡಿ ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿತು.

ವಾದಮಂಡನೆಗೆ ಹೆಚ್ ಡಿ ರೇವಣ್ಣ ಪರ ವಕೀಲರು ಕಾಲಾವಕಾಶ ಕೋರಿದರು. ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇದ್ದಾರೆ ಎಂಬ ಕಾರಣ ನೀಡಿ ಮನವಿ ಮಾಡಲಾಯಿತು.

ಎಚ್ ಡಿ ರೇವಣ್ಣ ಪರ ವಕೀಲರ ಮನವಿಗೆ ಹೈಕೋರ್ಟ್ ಇದೆ ವೇಳೆ ಅಸಮಾಧಾನ ಹೊರಹಾಕಿದ್ದು, ಶಾಸಕ ಎಚ್ ಡಿ ರೇವಣ್ಣ ವಿರುದ್ಧ ದೋಷಾರೋಪ ಹೊರಿಸಿದಂತೆ ನೀಡಿದ್ದ ಮಧ್ಯಂತರ ತಡೆ ತೆರವುಗೊಳಿಸಲಾಯಿತು. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments