ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೊಲ್ ಅವರ ಸಿಡಿಲಬ್ಬರದ ಆಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಬಾರಿ ಡಬ್ಲೂಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಡೋದರಾದರಲ್ಲಿ ಬುಧವಾರ ನಡೆದ ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಡ್ಡಿದ 204 ರನ್ ಗಳ ಸವಾಲು ಬೆಂಬತ್ತಿದ ಆರ್ ಸಿಬಿ 4 ವಿಕೆಟ್ ಕಳೆದುಕೊಂಡು 6 ವಿಕೆಟ್ ಜಯಭೇರಿಯೊಂದಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.
2014ರ ಚಾಂಪಿಯನ್ ಆಗಿದ್ದ ಆರ್ ಸಿಬಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಡೆಲ್ಲಿ ಕ್ಯಾಪಿಟಲ್ಸ್ 4ನೇ ಬಾರಿ ಫೈನಲ್ ನಲ್ಲಿ ಮುಗ್ಗರಿಸಿತು.
ಕಠಿಣ ಸವಾಲು ಬೆಂಬತ್ತಿದ ಆರ್ ಸಿಬಿ ತಂಡ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಆದರೆ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೊಲ್ 2ನೇ ವಿಕೆಟ್ ಗೆ 165 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಬಂದ ರಿಚಾ ಘೋಷ್ (6) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಸ್ಮೃತಿ ಮಂದಾನ 41 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿದರು.



