Wednesday, June 24, 2026
Google search engine
Homeಕ್ರೀಡೆಭಾರತ 6ನೇ ಬಾರಿ ಅಂಡರ್ 19 ವಿಶ್ವಕಪ್ ಚಾಂಪಿಯನ್: ಇಂಗ್ಲೆಂಡ್ ಗೆ 100 ರನ್ ಸೋಲು

ಭಾರತ 6ನೇ ಬಾರಿ ಅಂಡರ್ 19 ವಿಶ್ವಕಪ್ ಚಾಂಪಿಯನ್: ಇಂಗ್ಲೆಂಡ್ ಗೆ 100 ರನ್ ಸೋಲು

ಹರಾರೆ: ಸ್ಫೋಟಕ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತ ತಂಡ 100 ರನ್ ಗಳ ಅಗಾಧ ಅಂತರದಿಂದ ಮಣಿಸಿದ ಇಂಗ್ಲೆಂಡ್ ತಂಡವನ್ನು ಸೋಲಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಹರಾರೆಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 411 ರನ್ ಗಳ ದಾಖಲೆ ಮೊತ್ತ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ ಕ್ಯಾಲಿಬ್ ಫಾಲ್ಕನರ್ ಶತಕದ ಹೊರತಾಗಿಯೂ 40.2 ಓವರ್ ಗಳಲ್ಲಿ 311 ರನ್ ಗೆ ಆಲೌಟಾಯಿತು.

ಇಂಗ್ಲೆಂಡ್ ತಂಡ ಕ್ಯಾಲೆಬ್ ಫಾಲ್ಕೊನರ್ ಶತಕ ಹಾಗೂ ಬೆನ್ ಡಾಕಿನ್ಸ್ ಅರ್ಧಶತಕದ ಹೊರತಾಗಿಯೂ ಗುರಿ ತಲುಪುವಲ್ಲಿ ವಿಫಲವಾಯಿತು. ಫಾಲ್ಕೋನರ್ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 115 ರನ್ ಬಾರಿಸಿ ಔಟಾದರು.

ಬೆನ್ ಡಾಕಿನ್ಸ್ ಮತ್ತು ಬೆನ್ ಮೇಯಸ್ ಅವರ 74 ರನ್ 2ನೇ ವಿಕೆಟ್ ಜೊತೆಯಾಟದಿಂದ ಹೋರಾಟ ನಡೆಸಿದತು. ಡಾಕಿನ್ಸ್ 56 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 66 ರನ್ ಗಳಿಸಿದರೆ, ಮೇಯಸ್ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 45 ರನ್ ಚಚ್ಚಿದರು.

ಇವರಿಬ್ಬರು ಔಟಾದ ನಂತರ ನಾಯಕ ಥಾಮಸ್ ರ್ಯೂ (31) ಮತ್ತು ಕ್ಯಾಲೆಬ್ ಫಾಲ್ಕೊನರ್ ತಂಡವನ್ನು ಮುನ್ನಡೆಸಲು ಯತ್ನಿಸಿದರು. ಈ ವೇಳೆ ಭಾರತೀಯ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ಮಧ್ಯಮ ಕ್ರಮಾಮಕದಲ್ಲಿ ನಾಟಕೀಯ ಕುಸಿತ ಕಂಡ ಇಂಗ್ಲೆಂಡ್ ಶರಣಾಯಿತು.

ಸೂರ್ಯವಂಶಿಯ ವೈಭವ

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ವೈಭವ್ ಸೂರ್ಯವಂಶಿಯ ಸ್ಫೋಟಕ 175 ರನ್ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.

ಸೂರ್ಯವಂಶಿ 55 ಎಸೆತಗಳಲ್ಲಿ ಶತಕ ಪೂರೈಸಿದರು. ನಂತರ ಮತ್ತಷ್ಟು ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್ ಸಹಾಯದಿಂದ ತಮ್ಮ ಇನಿಂಗ್ಸ್ ಅನ್ನು 175ಕ್ಕೆ ವಿಸ್ತರಿಸಿದರು.

ಸೂರ್ಯವಂಶಿಗೆ ಉತ್ತಮ ಬೆಂಬಲ ನೀಡಿದ ನಾಯಕ ಆಯುಷ್ ಮಾತ್ರೆ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದ್ದೂ ಅಲ್ಲದೇ ಎರಡನೇ ವಿಕೆಟ್ ಗೆ 142 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು.

ನಂತರ ವೇದಾಂತ್ ತ್ರಿವೇದಿ (32) ಜೊತೆ ಸೂರ್ಯವಂಶಿ ಮೂರನೇ ವಿಕೆಟ್ ಗೆ 139 ರನ್ ಪೇರಿಸಿದರು. ವಿಹಾನ್ ಮಲ್ಹೋತ್ರಾ (30), ಅಭಿಗ್ಯಾನ್ ಕುಂದ್ (40), ಅಂಬರೀಷ್ (18) ಮತ್ತು ಕಾನಿಷ್ಕ್ ಚೌಹಾಣ್ (37) ತಂಡವನ್ನು 400ರ ಗಡಿ ದಾಟಿಸಿದರು.vaibhav suryavamshi,

ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ 3 ವಿಕೆಟ್ ಪಡೆದರೆ, ಸ್ಯಾಬೆಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ 2 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments