ಬಳ್ಳಾರಿ: ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾಂಸದ ಮೂಳೆಗಳು ಪತ್ತೆಯಾಗಿರುವ ಘಟನೆ ನಗರದ ನಾಗಲಕೆರೆ ಪ್ರದೇಶದಲ್ಲಿ ನಡೆದಿದೆ.
ನಾಗಲಕೆರೆ ಪ್ರದೇಶದ ಶ್ರೀ ಆಂಜನೇಯ ದೇವಸ್ಥಾನ ಬಹಳ ಹೆಸರಾಂತ ದೇವಸ್ಥಾನವಾಗಿದ್ದು, ಈ ದೇಗುಲದಲ್ಲಿ ಇಂತಹ ಘಟನೆಗಳು ನಡೆಯಲು ನಂಬಲಾಗುತ್ತಿಲ್ಲ. ನಾಯಿ ಅಥವಾ ಬೆಕ್ಕು ತಂದು ದೇವಸ್ಥಾನದಲ್ಲಿ ಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ದೇವಸ್ಥಾನದ ಒಳಗೆ ಮಾಂಸದ ಮೂಳೆಗಳು ಕರಿ ಪ್ಲಾಸ್ಟಿಕ್ ಕವರ್ ನಲ್ಲಿ ಪತ್ತೆಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಬಳ್ಳಾರಿ ವಲಯ ಐಜಿಪಿ ಹರ್ಷ, ಕೌಲ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



