Saturday, May 16, 2026
Google search engine
Homeವಿದೇಶಥಾಯ್ಲೆಂಡ್ ನಲ್ಲಿ ಶಿಕ್ಷಕನ ಮೇಲಿನ ಸಿಟ್ಟಿಗೆ 22 ಮಕ್ಕಳು ಸೇರಿ 34 ಮಂದಿ ಹತ್ಯೆ

ಥಾಯ್ಲೆಂಡ್ ನಲ್ಲಿ ಶಿಕ್ಷಕನ ಮೇಲಿನ ಸಿಟ್ಟಿಗೆ 22 ಮಕ್ಕಳು ಸೇರಿ 34 ಮಂದಿ ಹತ್ಯೆ

ಬಂದೂಕುಧಾರಿಯೊಬ್ಬ ಶಿಶು ವಿಹಾರ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ 22 ಮಕ್ಕಳು ಸೇರಿದಂತೆ 34 ಮಂದಿ ಮೃತಪಟ್ಟ ದಾರುಣ ಘಟನೆ ಥಾಯ್ಲೆಂಡ್ ನಲ್ಲಿ ನಡೆದಿದೆ.

ಸಾಂಗ್ಖ್ಲಾ ಪ್ರಾಂತ್ಯದ ಶಾಲೆಯ ಮೇಲೆ ಗುರುವಾರ ನಡೆದ 18 ವರ್ಷದ ಬಂದೂಕುಧಾರಿ ಎಂ-4 ಗನ್ ನಿಂದ ಈ ದಾಳಿ ನಡೆಸಿದ್ದಾನೆ. ದಾಳಿಕೋರನ ಸಹೋದರಿ ಅದೇ ಶಾಲೆಯಲ್ಲಿ ಓದುತ್ತಿದ್ದು, ಕೆಲವು ದಿನಗಳ ಹಿಂದೆ ಸಹೋದರಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದ ಶಿಕ್ಷಕನ ಮೇಲೆ ಪ್ರತಿಕಾರವಾಗಿ ಈ ದಾಳ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಯ ನಂತರ ದಾಳಿಕೋರ ಹಲವಾರು ಮಕ್ಕಳು ಮತ್ತು ಶಿಕ್ಷಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಶಾಲೆಯೊಳಗೆ ಇನ್ನೂ ಹಲವಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ವಿಶೇಷ ಪಡೆಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದವು. ಪೊಲೀಸರು ಇಡೀ ಶಾಲೆಯನ್ನು ಸುತ್ತುವರೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ದಾಳಿಕೋರನ ಗುರುತು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments