Saturday, May 16, 2026
Google search engine
Homeದೇಶಹೋಳಿ ದುರಂತ: ಗುಜರಾತ್ ನಲ್ಲಿ 30 ಮಂದಿ ಜಲಸಮಾಧಿ

ಹೋಳಿ ದುರಂತ: ಗುಜರಾತ್ ನಲ್ಲಿ 30 ಮಂದಿ ಜಲಸಮಾಧಿ

ಹೋಳಿ ಹಬ್ಬದ ಸಂಭ್ರಮದಲ್ಲಿ ಈಜಲು ಹೋದ 30ಕ್ಕೂ ಅಧಿಕ ಯುವಕರು, ಮಕ್ಕಳು ಪ್ರತ್ಯೇಕ ಘಟನೆಗಳಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ.

ಸೂರತ್ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ 7 ಮಂದಿ ಮೃತಪಟ್ಟಿದ್ದರೆ, ಅಹಮದಾಬಾದ್ ನಗರ ಮತ್ತು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ 7, ಮಹಿಸಾಗರ್ ಜಿಲ್ಲೆಯಲ್ಲಿ 4, ನರ್ಮದಾ ಜಿಲ್ಲೆಯಲ್ಲಿ 3, ಅರಾವಳಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ 4, ಅಮ್ರೇಲಿ ಮತ್ತು ದ್ವಾರಾಕಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಸೂರತ್ ಜಿಲ್ಲೆಯ ಮಂಗ್ರೋಲ್ ಪನ್ಸಾರಾದ ಕಿಮ್ ನದಿಯಲ್ಲಿ ಸ್ನಾನ ಮಾಡುವಾಗ ಮೂವರು ಯುವಕರು ಮುಳುಗಿ ಮೃತಪಟ್ಟಿದ್ದಾರೆ.

ಪನ್ಸಾರ ಗ್ರಾಮದ ಬಳಿಯ ನಿವಾಸದಲ್ಲಿ ವಾಸಿಸುತ್ತಿದ್ದ ಯುವಕರು ಬುಧವಾರ ಬೆಳಗ್ಗೆಯಿಂದಲೇ ಉತ್ಸಾಹದಿಂದ ಹೋಳಿ ಆಡಿದ್ದರು. ಬಣ್ಣಗಳೊಂದಿಗೆ ಆಟವಾಡಿದ ನಂತರ, ಅವರು ಹತ್ತಿರದ ಕಿಮ್ ನದಿಯಲ್ಲಿ ಸ್ನಾನ ಮಾಡಲು ತೆರಳಿದಾಗ ಇದ್ದಕ್ಕಿದ್ದಂತೆ ಆಳವಾದ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಘಟನೆಯ ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ಈಜುಗಾರರ ಸಹಾಯದಿಂದ, ನದಿಯ ನೀರಿನಿಂದ ಮೂವರು ಯುವಕರ ಶವಗಳನ್ನು ಹೊರತೆಗೆಯಲಾಯಿತು. ಮೃತರಲ್ಲಿ ಇಬ್ಬರು ವಲಸಿಗರು ಮತ್ತು ಒಬ್ಬ ಗುಜರಾತಿ ಯುವಕ ಸೇರಿದ್ದಾರೆ.

ಸೂರತ್ ಜಿಲ್ಲೆಯ ಇಸ್ರೋಲಿ ಗ್ರಾಮದ ಮಿಂದೋಲಾ ನದಿಯಲ್ಲಿ ಸ್ನಾನ ಮಾಡಲು ಹೋದ ಆರು ಸ್ನೇಹಿತರಲ್ಲಿ ನಾಲ್ವರು ದುರಂತವಾಗಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ರಾಜಧಾನಿ ಅಹಮದಾಬಾದ್ ನಗರದ ಕುಬೇರ್‌ನಗರ ಪ್ರದೇಶದ ನಾಲ್ವರು ಯುವಕರು ಕೋಟರ್‌ಪುರ ನಂದಿಗ್ರಾಮ್ ಬಳಿಯ ನದಿ ದಂಡೆಯಲ್ಲಿ ಸ್ನಾನ ಮಾಡಲು ಹೋದಾಗ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ. ಸೀತಾಪುರ ಗ್ರಾಮದ ಮೂವರು ಮಕ್ಕಳು ಜೋಲಾಸರ್ ಸರೋವರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಹಿಸಾಗರ್ ಜಿಲ್ಲೆಯ ಒಂದೇ ಗ್ರಾಮದ ನಾಲ್ವರು ಯುವಕರು ಮೃಪಟ್ಟಿದ್ದಾರೆ. ಕೋಥಂಭ ಬಳಿಯ ರಾಘವನ ಮುವಾಡಾ ಗ್ರಾಮದ ಸರೋವರದಲ್ಲಿ ಸ್ನಾನ ಮಾಡಲು ಹೋಗಿದ್ದ ನಾಲ್ವರು ಯುವಕರು ಒಟ್ಟಿಗೆ ಮುಳುಗಿ ಮೃತಪಟ್ಟಿದ್ದಾರೆ.

ನರ್ಮದಾ ಜಿಲ್ಲೆಯ ಸಿಸೋದರ ಮತ್ತು ಉರಿ ನಡುವಿನ ನರ್ಮದಾ ನದಿಯಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಒಬ್ಬ ಯುವಕನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ, ಇನ್ನೂ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಕ್ಯಾರವಾನ್‌ನಲ್ಲಿದ್ದ ಮೂರು ಜನರು ಸಿಸೋದರ ಗ್ರಾಮದ ಮಸೀದಿಗೆ ಎಸಿ ದುರಸ್ತಿ ಮಾಡಲು ಬಂದಿದ್ದರು.

ಮೆಹ್ಸಾನಾ ಜಿಲ್ಲೆಯ ಮೋತಿಡೌ ಮತ್ತು ಕಾಡಿಯಲ್ಲಿ ಕಾಲುವೆಗಳಲ್ಲಿ ಸ್ನಾನ ಮಾಡುವಾಗ ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಮೋತಿಡೌ ಬಳಿಯ ಸುಜಲಾಮ್ ಸುಫಲಾಮ್ ಕಾಲುವೆಯಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ಇದೇ ಜಿಲ್ಲೆಯ ಕಾಡಿಯ ಪಂಥಕ್‌ನಲ್ಲಿಯೂ ಇದೇ ರೀತಿಯ ಭಯಾನಕ ಘಟನೆ ಸಂಭವಿಸಿದೆ. ಕಾಡಿಯ ಥೋಲ್ ರಸ್ತೆಯಲ್ಲಿರುವ ಸಿಂಧ್ವಾಯಿ ಮಾತಾಜಿ ದೇವಾಲಯದ ಬಳಿ ಹಾದುಹೋಗುವ ಮುಖ್ಯ ನರ್ಮದಾ ಕಾಲುವೆಯ ಪಕ್ಕದಲ್ಲಿರುವ ಸಣ್ಣ ಕಾಲುವೆಯಲ್ಲಿ ಯುವಕನೊಬ್ಬ ಮುಳುಗಿ ಸಾವನ್ನಪ್ಪಿದ್ದಾನೆ.

ಅರಾವಳಿ ಜಿಲ್ಲೆಯ ಜಲಂಪುರ ಬಳಿಯ ಮಜುಮ್ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ಹಾಗೂ ಮಾಲ್ಪುರದ ನವದಲ್ಲಿ ಮುಳುಗಿ ಇಬ್ಬರು ಅಮಾಯಕ ಮಕ್ಕಳು ಸಾವನ್ನಪ್ಪಿದ್ದಾರೆ.

ದ್ವಾರಕ ಜಿಲ್ಲೆಯ ಸರೋವರದಲ್ಲಿ ಸ್ನಾನ ಮಾಡುವಾಗ ಓರ್ವ ಬಾಲಕ ಮುಳುಗಿ ಮೃಪಟ್ಟಿದ್ದಾನೆ. ಒಟ್ಟಾರೆ ಬಣ್ಣದ ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯಕ್ಕೆ 25ಕ್ಕೂ ಹೆಚ್ಚು ಸಾವಿನ ಪ್ರಕರಣಗಳಿಂದಾಗಿ ಶೋಕಾಚರಣೆಯಾಗಿ ಮಾರ್ಪಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments