ಎಲ್ ಪಿಜಿ ಗ್ಯಾಸ್ ತುಂಬಿದ ಎರಡು ಹಡಗುಗಳನ್ನು ಹರ್ಮುಜ್ ಜಲಸಂಧಿಯಿಂದ ಇರಾನ್ ಬಿಡುಗಡೆ ಮಾಡಿದ್ದು ಭಾರತದತ್ತ ಆಗಮಿಸುತ್ತಿವೆ.
ತೈಲ ತುಂಬಿದ ಎರಡು-೩ ಹಡಗು ಬಿಟ್ಟು ಕಳುಹಿಸಿದ್ದ ಇರಾನ್ ಇದೀಗ ಮತ್ತೆರಡು ಎಲ್ ಪಿಜಿ ಹಡಗುಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ಯಾಸ್ ಸಿಲಿಂಡರ್ ಕೊರತೆ ಎದುರಿಸುತ್ತಿದ್ದ ಭಾರತ ನಿಟ್ಟುಸಿರುಬಿಡುವಂತಾಗಿದೆ.
ಭಾರತ ನಮ್ಮ ಮಿತ್ರ ರಾಷ್ಟ್ರ. ಹಾಗಾಗಿ ಅವರಿಗೆ ತೊಂದರೆ ಮಾಡುವುದು ನಮಗೆ ಇಷ್ಟವಿಲ್ಲ. ಹಾಗಾಗಿ ಹರ್ಮಿಜ್ ಜಲಸಂಧಿಯಲ್ಲಿ ತಡೆ ಹಿಡಿದು ನಿಲ್ಲಿಸಲಾಗಿರುವ ನೂರಾರು ಹಡಗುಗಳ ಪೈಕಿ ಭಾರತದ ಹಡಗುಗಳನ್ನು ಇರಾನ್ ಬಿಡುಗಡೆ ಮಾಡಿದೆ.
ಇರಾಜ್ ಜೊತೆ ಭಾರತ ರಾಜತಾಂತ್ರಿಕ ಮಾತುಕತೆ ನಡೆಸಿದ ನಂತರ ಇರಾನ್ ಭಾರತದ ಹಡಗುಗಳನ್ನು ಬಿಡುಗಡೆ ಮಾಡಲು ಒಪ್ಪಿದೆ. ಭಾರತದ ಶಿವಾಲಿಕ್ ಮತ್ತು ನಂದಾದೇವಿ ಎಂಬ ಎರಡು ಹಡಗುಗಳನ್ನು ಇರಾನ್ ಹರ್ಮುಜ್ ಜಲಸಂಧಿಯಿಂದ ಬಿಡುಗಡೆ ಮಾಡಿ ಕಳುಹಿಸಿಕೊಟ್ಟಿದೆ.
ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದ ನಂತರ ಹರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳನ್ನು ತಡೆ ಹಿಡಿದು ನಿಲ್ಲಿಸಲಾಗಿದ್ದು, ಇದರಲ್ಲಿ ಭಾರತದ 28 ಹಡಗುಗಳು ನಿಲ್ಲಿಸಲಾಗಿದೆ.
ಭಾರತದ ಮತ್ತೊಂದು ಹಡಗು ಜಗ್ ಪ್ರಕಾಶ್ ಕೂಡ ಭಾರತದತ್ತ ಹೊರಡಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಹಡಗು ಹಾಗೂ ಬಂದರುಗಳಲ್ಲಿ ಭಾರತದ 30ಸಾವಿರಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ.



