Friday, May 15, 2026
Google search engine
Homeಮನರಂಜನೆಆಸ್ಕರ್ ಪ್ರಶಸ್ತಿ ಪ್ರಕಟ: ಮೈಕೆಲ್ ಜೊರ್ಡಾನ್, ಜೆಸ್ಸಿ ಬಕ್ಲಿಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ

ಆಸ್ಕರ್ ಪ್ರಶಸ್ತಿ ಪ್ರಕಟ: ಮೈಕೆಲ್ ಜೊರ್ಡಾನ್, ಜೆಸ್ಸಿ ಬಕ್ಲಿಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ

ಲಾಸ್ ಏಂಜಲೀಸ್: ಸಿನ್ನರ್ಸ್ ಚಿತ್ರಕ್ಕಾಗಿ ಮೈಕಲ್ ಬಿ ಜೋರ್ಡಾನ್ ಮತ್ತು ಹ್ಯಾಮ್ನೆಟ್ ಚಿತ್ರಕ್ಕಾಗಿ ಜೆಸ್ಸಿ ಬಕ್ಲಿ ಪ್ರತಿಷ್ಠಿತ ಶ್ರೇಷ್ಠ ನಟ ಹಾಗೂ ನಟಿ ಆಸ್ಕರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಲಾಸ್ ಏಂಜಲೀಸ್ ನಲ್ಲಿ ಭಾನುವಾರ ತಡರಾತ್ರಿ ನಡೆದ 98ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಸಮಾರಂಭದಲ್ಲಿ ಒನ್ ಬ್ಯಾಟಲ್ ಆಫ್ ಅನದರ್ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನಕ್ಕಾಗಿ ಪಾಲ್ ಥಾಮಸ್ ಆಂಡರ್ಸನ್ ಸೇರಿದಂತೆ 6 ಪ್ರಶಸ್ತಿಗಳನ್ನು ಬಾಚಿಕೊಂಡು ಪ್ರಾಬಲ್ಯ ಮೆರೆಯಿತು.

ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಚಿತ್ರದ ಅಭಿನಯಕ್ಕಾಗಿ ಸೀನ್ ಪೆನ್ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅತ್ಯುತ್ತಮ ಪೋಷಕ ನಟಿ: ‘ವೆಪನ್ಸ್’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಆಮಿ ಮಡಿಗನ್ ಅವರಿಗೆ ಈ ಗೌರವ ಸಂದಿದೆ. ಈ ಮೂಲಕ 75ನೇ ವಯಸ್ಸಿನಲ್ಲಿ ಸುದೀರ್ಘ 47 ವರ್ಷಗಳ ನಂತರ ಪ್ರಶಸ್ತಿ ಪಡೆದ ಗೌರವಕ್ಕೆ ಪಾತ್ರರಾದರು.

ಇತಿಹಾಸ ನಿರ್ಮಿಸಿದ ‘ಬೆಸ್ಟ್ ಕಾಸ್ಟಿಂಗ್’ ಪ್ರಶಸ್ತಿ: ಆಸ್ಕರ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅತ್ಯುತ್ತಮ ಕಾಸ್ಟಿಂಗ್’ ಪ್ರಶಸ್ತಿಯನ್ನು ನೀಡಲಾಗಿದ್ದು, ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಚಿತ್ರಕ್ಕಾಗಿ ಕ್ಯಾಸಂಡ್ರಾ ಕುಲುಕುಂಡಿಸ್ ಅವರು ಈ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments