Friday, May 15, 2026
Google search engine
Homeದೇಶಹೋಟೆಲ್‌ ಮಾಲೀಕರಿಗೆ ಸಿಹಿಸುದ್ದಿ: ವಾಣಿಜ್ಯ ಸಿಲಿಂಡರ್‌ ಪೂರೈಕೆ ಶೇ.70ಕ್ಕೆ ಹೆಚ್ಚಿಸಿದ ಕೇಂದ್ರ!

ಹೋಟೆಲ್‌ ಮಾಲೀಕರಿಗೆ ಸಿಹಿಸುದ್ದಿ: ವಾಣಿಜ್ಯ ಸಿಲಿಂಡರ್‌ ಪೂರೈಕೆ ಶೇ.70ಕ್ಕೆ ಹೆಚ್ಚಿಸಿದ ಕೇಂದ್ರ!

ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಪೂರೈಕೆಯನ್ನು ಶೇ.70ಕ್ಕೆ ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಮೂಲಕ ಹೋಟೆಲ್‌ ಮಾಲೀಕರು ನಿಟ್ಟುಸಿರುಬಿಡುವಂತಾಗಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ಆಗಿರುವ ಕೊರತೆ ಕುರಿತು ರಾಜ್ಯ ಸರ್ಕಾರಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಶೇ.20ರಷ್ಟು ಹೆಚ್ಚುವರಿ ಗ್ಯಾಸ್‌ ಪೂರೈಸುವುದಾಗಿ ಹೇಳಿದೆ.

ಇರಾನ್‌ ಅಮೆರಿಕ ಮತ್ತು ಇಸ್ರೇಲ್‌ ನಡುವಣ ಯುದ್ಧದಿಂದಾಗಿ ಹರ್ಮುಜ್‌ ಜಲಸಂಧಿ ಮುಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಪೂರೈಕೆಯನ್ನು ಶೇ.20ಕ್ಕೆ ಕಡಿತಗೊಳಿಸಿತ್ತು. ನಂತರ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಶೇ.10ರಷ್ಟು ಏರಿಕೆ ಮಾಡಿತ್ತು.

ಇತ್ತೀಚೆಗೆ ಕೆಲವು ಎಲ್‌ ಪಿಜಿ ಹಡಗುಗಳು ಬಂದಿದ್ದೂ ಅಲ್ಲದೇ ದೇಶೀಯ ಉತ್ಪಾದನೆ ಪ್ರಮಾಣ ಶೇ.40ರಷ್ಟು ಹೆಚ್ಚಿಸಿದ ನಂತರ ಶೇ.20ರಷ್ಟು ಏರಿಕೆ ಮಾಡಿತ್ತು. ಇದೀಗ ಮತ್ತೆ ಶೇ.20ರಷ್ಟು ಗ್ಯಾಸ್‌ ಸಿಲಿಂಡರ್‌ ಪೂರೈಕೆ ಹಿನ್ನೆಲೆಯಲ್ಲಿ ಒಟ್ಟಾರೆ ಶೇ.70ಕ್ಕೆ ಹೆಚ್ಚಿಸಿದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments