ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2026ರ ಮೊದಲ ಪಂದ್ಯದಲ್ಲೇ 127 ರನ್ ಗಳಿಗೆ ಆಲೌಟಾಗಿದೆ.
ಗುವಾಹತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ ಗಳಲ್ಲಿ 127 ರನ್ ಗೆ ಆಲೌಟಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳು ಸಂಘಟಿತ ದಾಳಿ ನಡೆಸಿದ್ದು, ಪವರ್ ಪ್ಲೇಯಲ್ಲಿ ಚೆನ್ನೈ ಬೆನ್ನೆಲುಬು ಮುರಿದರು. ತಂಡದ ಮೂವರು ಆಟಗಾರರು ಮಾತ್ರ ಎರಡಂಕಿಯ ಮೊತ್ತ ದಾಟಿಸಿದರು.
ಗಾಯಗೊಂಡಿರುವ ಧೋನಿ ಅನುಪಸ್ಥಿತಿಯಲ್ಲಿ ಹೊಸ ರೂಪ ಪಡೆದ ಅಖಾಡಕ್ಕೆ ಇಳಿದ ಚೆನ್ನೈ ತಂಡ ಒಂದು ಹಂತದಲ್ಲಿ 82 ರನ್ ಗೆ 8 ವಿಕೆಟ್ ಕಳೆದುಕೊಂಡು 100ರ ಗಡಿ ದಾಟುವುದೇ ಅನುಮಾನವಾಗಿತ್ತು.
ಜೆಮಿ ಓವರ್ಟನ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 43 ರನ್ ಬಾರಿಸಿದ್ದೂ ಅಲ್ಲದೇ 10ನೇ ವಿಕೆಟ್ ಗೆ ಅನ್ಸುಲ್ ಕಂಬೊಜ್ (7) 33 ರನ್ ಜೊತೆಯಾಟದಿಂದ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತು ಗಮನ ಸೆಳೆದರು.



