Thursday, May 28, 2026
Google search engine
Homeಕ್ರೀಡೆIPL 2026 `ಹಿಂಗೆ' ದಾಳಿಗೆ ಹಂಗೆ ಉದುರಿದ ರಾಜಸ್ಥಾನ್‌ ರಾಯಲ್ಸ್‌ ಗೆ ಮೊದಲ ಸೋಲು

IPL 2026 `ಹಿಂಗೆ’ ದಾಳಿಗೆ ಹಂಗೆ ಉದುರಿದ ರಾಜಸ್ಥಾನ್‌ ರಾಯಲ್ಸ್‌ ಗೆ ಮೊದಲ ಸೋಲು

ಚೊಚ್ಚಲ ಪಂದ್ಯವಾಡಿದ ಪ್ರಫುಲ್‌ ಹಿಂಗೆ ಮತ್ತು ಸಕೀಬ್‌ ಹುಸೇನ್‌ ಮಾರಕ ದಾಳಿ ನೆರವಿನಿಂದ 57 ರನ್‌ ಗಳ ಭರ್ಜರಿ ಜಯ ಸಾಧಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಗೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದೆ.

ಹೈದರಾಬಾದ್‌ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ 20 ಓವರ್‌ ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 216 ರನ್‌ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್‌ ರಾಯಲ್ಸ್‌ 19 ಓವರ್‌ ಗಳಲ್ಲಿ 159 ರನ್‌ ಗೆ ಆಲೌಟಾಯಿತು.

ಟೂರ್ನಿ ಆರಂಭದಿಂದ ಸತತ 4 ಗೆಲುವಿನೊಂದಿಗೆ ಬೀಗುತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ಗೆ ಇದು ಮೊದಲ ಸೋಲಾಗಿದೆ. ಈ ಗೆಲುವಿನೊಂದಿಗೆ ಎಸ್‌ ಆರ್‌ ಎಚ್‌ 4 ಅಂಕದೊಂದಿಗೆ 4ನೇ ಸ್ಥಾನಕ್ಕೇರಿತು.

ಮಧ್ಯಮ ವೇಗಿ ಫುಲ್‌ ಹಿಂಗೆ ಮೊದಲ ಓವರ್‌ ನಲ್ಲಿಯೇ 3 ವಿಕೆಟ್‌ ಸೇರಿದಂತೆ 4 ವಿಕೆಟ್‌ ಪಡೆದು ರಾಜಸ್ಥಾನ್‌ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರೆ ನಂತರ ಸಕೀಬ್‌ ಹಸನ್‌ ನಂತರ 4 ವಿಕೆಟ್‌ ಪಡೆದು ಮಿಂಚಿದರು.

ರಾಜಸ್ಥಾನ್‌ ರಾಯಲ್ಸ್‌ ಒಂದು ಹಂತದಲ್ಲಿ 9 ರನ್‌ ಗೆ 5 ವಿಕೆಟ್‌ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ ಡೊನೊವನ್‌ ಪೆರೆರಾ ಮತ್ತು ರವೀಂದ್ರ ಜಡೇಜಾ 6ನೇ ವಿಕೆಟ್‌ ಗೆ 118 ರನ್‌ ಜೊತೆಯಾಟ ನಿಭಾಯಿಸಿದರು.

ಡೊನೊವನ್‌ ಪೆರೆರಾ 44 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ ಸೇರಿದಂತೆ 69 ರನ್‌ ಪೇರಿಸಿದರೆ, ಜಡೇಜಾ 32 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 45 ರನ್‌ ಗಳಿಸಿದರು. ಕೊನೆಯಲ್ಲಿ ತುಷಾರ್‌ ದೇಶಪಾಂಡೆ 3 ಸಿಕ್ಸರ್‌ ಸಹಾಯದಿಂದ 25 ರನ್‌ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ನಾಯಕ ಇಶಾನ್‌ ಕಿಶನ್‌ ಗಳಿಸಿ 91 ರನ್‌ ಸಹಾಯದಿಂದ ಬೃಹತ್‌ ಮೊತ್ತ ದಾಖಲಿಸಿತು. ಕಿಶನ್‌ ಇದಕ್ಕಾಗಿ 44 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ ಸಿಡಿಸಿದರು. ನಿತಿಶ್‌ ಕುಮಾರ್‌ ರೆಡ್ಡಿ (28), ಸಲಿಲ್‌ ಅರೋರಾ (24) ಮತ್ತು ಟ್ರಾವಿಸ್‌ ಹೆಡ್‌ (18) ತಂಡದ ಮೊತ್ತ ಉಬ್ಬಿಸಲು ನೆರವಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments