Thursday, May 28, 2026
Google search engine
Homeಬೆಂಗಳೂರುಪೊಲೀಸ್ ಮೆಟ್ಟಿಲೇರಿದ ಬೆಕ್ಕು ಮರಿ ಹಾಕಿದ ವಿಚಾರ: ನೆರೆಹೊರೆಯವರ ಹೊಡೆದಾಟ

ಪೊಲೀಸ್ ಮೆಟ್ಟಿಲೇರಿದ ಬೆಕ್ಕು ಮರಿ ಹಾಕಿದ ವಿಚಾರ: ನೆರೆಹೊರೆಯವರ ಹೊಡೆದಾಟ

ಬೆಂಗಳೂರು:ಅಕ್ಕಪಕ್ಕದ ಮನೆಗಳ ನಡುವೆ ಬೆಕ್ಕುಗಳ ವಿಚಾರದ ಸಂಬಂಧ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಶೇಷಾದ್ರಿಪುರದಲ್ಲಿ ನಡೆದಿದೆ.

ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದ ನಾಲ್ಕು ಮರಿಗಳು ಜನಿಸಿದ್ದು, ಈ ವಿಚಾರವೇ ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.

ತಮ್ಮ ಮನೆಯ ಹೆಣ್ಣು ಬೆಕ್ಕಿನ ಜೊತೆ ನಾಲ್ಕು ಮರಿಗಳೂ ಮನೆಗೆ ಸೇರಿರುವುದನ್ನು ಕಂಡ ಮಾಲೀಕರು ಪಕ್ಕದ ಮನೆಯವರೊಂದಿಗೆ ಜಗಳಕ್ಕಿಳಿದಿದ್ದಾರೆ. ಈ ಮರಿಗಳು ಗಂಡು ಬೆಕ್ಕಿನದ್ದೇ ಎಂದು ವಿವಾದಕ್ಕಿಳಿದ ಹೆಣ್ಣು ಬೆಕ್ಕಿನ ಮಾಲೀಕರು ಮರಿಗಳನ್ನು ಗಂಡು ಬೆಕ್ಕಿನ ಮನೆಯ ಮುಂದೆ ಬಿಸಾಡಿ ಜಗಳ ನಡೆಸಿದ್ದಾರೆ ಎನ್ನಲಾಗಿದೆ.

ವಿವಾದದ ವೇಳೆ ಗಂಭೀರ ಆರೋಪಗಳೂ ಕೇಳಿಬಂದಿದ್ದು, ಹೆಣ್ಣು ಬೆಕ್ಕಿನ ಮನೆಯವರು ಆಕ್ರೋಶದಿಂದ ನಿಮ್ಮ ಮಕ್ಕಳಿಗೆ ಆಸಿಡ್ ಹಾಕುವೆ ಎಂದು ಅತಿರೇಕದ ಮಾತನ್ನಾಡಿದ್ದಾರೆಂದು ಪಕ್ಕದ ಮನೆಯವರು ಆರೋಪಿಸಿದ್ದಾರೆ.

ಮರಿಗಳು ಅನಾಥ:

ಈ ಗಲಾಟೆಯ ನಡುವೆ ಮರಿಗಳು ತಾಯಿಯಿಂದ ದೂರವಾಗಿ ದಿಕ್ಕಾಪಾಲಾಗಿದ್ದು, ತಾಯಿ ಬೆಕ್ಕು ತನ್ನ ಮರಿಗಳನ್ನು ಹುಡುಕುತ್ತ ನರಳುತ್ತಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಗಂಡು ಬೆಕ್ಕಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶೇಷಾದ್ರಿಪುರ ಪೊಲೀಸರು ಎರಡೂ ಮನೆಯವರನ್ನು ಸಮಾಧಾನಪಡಿಸಿ ಜಗಳವನ್ನು ಶಮನಗೊಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments