ಕೇರಳಂ ನೂತನ ಸಿಎಂ ಅಭ್ಯರ್ಥಿಯಾಗಿ ವಿಡಿ ಸತೀಶನ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸುವ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತೆರೆ ಎಳೆದಿದೆ.
ಕೇರಳ ಪ್ರತಿಪಕ್ಷ ನಾಯಕನಾಗಿದ್ದ 61 ವರ್ಷದ ಸತೀಶನ್ ಅವರ ಹೆಸರನ್ನು ಘೋಷಿಸಿದ್ದು, ರಾಹುಲ್ ಗಾಂಧಿ ಅವರ ಆಪ್ತ ಕೆಸಿ ವೇಣುಗೋಪಾಲ್ ಹಾಗೂ ರಮೇಶ್ ಚಿಂತಲಾಲ್ ಅವರಿಗೆ ನಿರಾಸೆ ಆಗಿದೆ.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸುತ್ತಿದ್ದ ಬೆನ್ನಲ್ಲೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಂತೆ ನಡೆದಿತ್ತು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಸಿಎಂ ಆಯ್ಕೆ ಕಗ್ಗಂಟಾಗಿತ್ತು.
ಚುನಾವಣಾ ಫಲಿತಾಂಶ ಹೊರಬಂದ 10 ದಿನಗಳ ನಂತರ ಹಲವು ಸುತ್ತಿನ ಮಾತುಕತೆ ನಂತರ ಕಾಂಗ್ರೆಸ್ ಸತೀಶನ್ ಅವರನ್ನು ಹೆಸರನ್ನು ಅಂತಿಮಗೊಳಿಸಿತು.



