ಕಿಂಗ್ ವಿರಾಟ್ ಕೊಹ್ಲಿ ಒಂದೇ ಪಂದ್ಯದಲ್ಲಿ ಕ್ರಿಸ್ ಗೇಲ್, ರೋಹಿತ್ ಶರ್ಮ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದ ಸಾಧನೆ ಮಾಡಿದ್ದಾರೆ.
ಬುಧವಾರ ನಡೆದ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ತಂಡದ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 105 ರನ್ ಬಾರಿಸಿ ಔಟಾಗದೇ ಉಳಿದರು. 6 ವಿಕೆಟ್ ಜಯ ಸಾಧಿಸಿದ ಆರ್ ಸಿಬಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಗೇಲ್ ದಾಖಲೆ ಉಡೀಸ್:
ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ 78 ರನ್ ಗಳಿಸುತ್ತಿದ್ದಂತೆ ಟಿ-20 ಕ್ರಿಕೆಟ್ ನಲ್ಲಿ 14000 ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಅಲ್ಲದೇ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಈ ಸಾಧನೆಗಾಗಿ 423 ಇನಿಂಗ್ಸ್ ತೆಗೆದುಕೊಂಡಿದ್ದರೆ, ಕೊಹ್ಲಿ 409 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿ ಗೇಲ್ ದಾಖಲೆ ಮುರಿದರು. ಕ್ರಿಸ್ ಗೇಲ್ (14562), ಕೀರನ್ ಪೊಲಾರ್ಡ್ (14482), ಅಲೆಕ್ಸ್ ಹೇಲ್ಸ್ (14449), ಡೇವಿಡ್ ವಾರ್ನರ್ (14284) ಮತ್ತು ಜೋಸ್ ಬಟ್ಲರ್ (14200) ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿಗಿಂತ ಮುಂದೆ ಇದ್ದಾರೆ.
ಧೋನಿ ದಾಖಲೆ ಸಮ
ಕೊಹ್ಲಿ ಪ್ರಸ್ತುತ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್‌ನ ಉದ್ಘಾಟನಾ ಋತುವಿನಿಂದ (2008) ಆಡುತ್ತಿರುವ ಈ ಸ್ಟಾರ್ ಆಟಗಾರರು ತಲಾ 278 ಪಂದ್ಯಗಳನ್ನು ಆಡಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಗಾಯದಿಂದಾಗಿ ಧೋನಿ ಐಪಿಎಲ್ 2026ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ರೋಹಿತ್ ಮುಂದಿನ ಪಂದ್ಯದಲ್ಲಿ ಆಡಿದರೆ, ಅವರು ಕೊಹ್ಲಿ ದಾಖಲೆಯನ್ನು ಸರಿಗಟ್ಟುತ್ತಾರೆ. ಧೋನಿ ಮತ್ತು ರೋಹಿತ್ ಕೂಡ ೨೭೮ ಪಂದ್ಯಗಳನ್ನು ಆಡಿ ಸಮಾನ ಸ್ಥಾನದಲ್ಲಿದ್ದಾರೆ.
ಹಿಟ್ಮ್ಯಾನ್ ದಾಖಲೆ ಸಮ
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 105 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಐಪಿಎಲ್ ಇತಿಹಾಸದಲ್ಲಿ ಅವರ 21ನೇ ಪ್ರಶಸ್ತಿಯಾಗಿದೆ. ಇದರೊಂದಿಗೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಅವರು ರೋಹಿತ್ ಶರ್ಮಾ (21) ಅವರ ದಾಖಲೆ ಸರಿಗಟ್ಟಿದರು. 18 ಪ್ರಶಸ್ತಿಗಳೊಂದಿಗೆ ಎಂಎಸ್ ಧೋನಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಪ್ರಸ್ತುತ ಅವರ ಈ ಟೂರ್ನಿಯಲ್ಲಿ 9040 ರನ್ ಕಲೆಹಾಕಿದ್ದಾರೆ. ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೇ ಇವರ ಹತ್ತಿರಕ್ಕೆ ಬರಲು ಯಾವುದೇ ಬ್ಯಾಟರ್ಗಳಿಗೆ ಅಸಾಧ್ಯವಾಗಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 7289 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ 9ನೇ ಶತಕ:
ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ ತಮ್ಮ 9ನೇ ಐಪಿಎಲ್ ಶತಕವನ್ನು ಗಳಿಸಿದರು. ಐಪಿಎಲ್ ಇತಿಹಾಸದಲ್ಲಿ 9 ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಜೊತೆಗೆ ಜೋಸ್ ಬಟ್ಲರ್ ಅವರ ದಾಖಲೆ ಸರಿಗಟ್ಟಿದರು. ಚೇಸಿಂಗ್ ಮಾಡುವಾಗ ಜೋಸ್ ಬಟ್ಲರ್ 3 ಶತಕ ಸಿಡಿಸಿದ್ದರು.ಮತ್ತು ಬೆನ್ ಸ್ಟೋಕ್ಸ್ (2) ಅವರನ್ನು ಹಿಂದಿಕ್ಕಿದರು.
ಏತನ್ಮಧ್ಯೆ, ಕೆಕೆಆರ್ ವಿರುದ್ಧ ಕೊಹ್ಲಿಯ ಎರಡನೇ ಶತಕ ಇದಾಗಿದ್ದು ಜೋಸ್ ಬಟ್ಲರ್ ನಂತರ ಎರಡು ವಿಭಿನ್ನ ಐಪಿಎಲ್ ತಂಡಗಳ ವಿರುದ್ಧ ತಲಾ ಎರಡು ಶತಕಗಳನ್ನು ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು



