Friday, May 15, 2026
Google search engine
Homeದೇಶ4 ವರ್ಷದಲ್ಲೇ ಮೊದಲ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ: ಏನೆಲ್ಲಾ ಪರಿಣಾಮ ಗೊತ್ತಾ?

4 ವರ್ಷದಲ್ಲೇ ಮೊದಲ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ: ಏನೆಲ್ಲಾ ಪರಿಣಾಮ ಗೊತ್ತಾ?

ಪೆಟ್ರೋಲ್‌, ಡೀಸೆಲ್‌ ಮತ್ತು ಸಿಎನ್‌ ಜಿ ದರ ಲೀಟರ್‌ ಗೆ 3 ರೂ. ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಮೂಲಕ ೪ ವರ್ಷಗಳ ನಂತರ ಮೊದಲ ಬಾರಿ ಪೆಟ್ರೋಲ್‌ ದರ ಏರಿಕೆ ಮಾಡಲಾಗಿದೆ.

ಬುಧವಾರದಿಂದಲೇ ಪೆಟ್ರೋಲ್ ಮತ್ತು ಡೀಸೆಲ್‌ ದರ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ ಗೆ 102.92 ರೂ.ನಿಂದ 106.17 ರೂ.ಗೆ ಜಿಗಿತ ಕಂಡಿದ್ದರೆ, ಡೀಸೆಲ್‌ ಲೀಟರ್‌ ಗೆ 90.99 ರೂ.ನಿಂದ 94.10 ರೂ.ಗೆ ಏರಿಕೆಯಾಗಿದೆ.

ಪೆಟ್ರೋಲ್‌ ದರ ಏರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಕು ಸಾಗಾಟ ದರ ಹೆಚ್ಚಳವಾಗಲಿದೆ. ಇದರಿಂದ ಆಹಾರ, ಕಚ್ಚಾ ವಸ್ತುಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳ ದರ ಏರಿಕೆಯಾಗಲಿದೆ. ಕ್ಯಾಬ್‌ ಸೇವೆಯೂ ದುಬಾರಿ ಆಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments