ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರನ್ನು ಲಂಚ ನೀಡಿ ಗುತ್ತಿಗೆ ಪಡೆಯುತ್ತಾರೆ ಎಂಬುದು ಸೇರಿದಂತೆ ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿರುವ ಅಮೆರಿಕ ನ್ಯಾಯಾಲಯ, ಎಲ್ಲಾ ಪ್ರಕರಣಗಳನ್ನು ಶಾಶ್ವತವಾಗಿ ರದ್ದುಗೊಳಿಸಿದೆ.
ಯುಎಸ್ ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ಭಾರತೀಯ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅವರನ್ನು ದೋಷಮುಕ್ತಗೊಳಿಸಿ ಸೋಮವಾರ ತೀರ್ಪು ನೀಡಿದೆ.
ಸೋಲಾರ್ ಎನರ್ಜಿ ಯೋಜನೆಗಳನ್ನು ಪಡೆಯಲು ಅಮೆರಿಕ ಸರ್ಕಾರದ ವಿವಿಧ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಭ್ರಷ್ಟಾಚಾರ ಹಾಗೂ ಭದ್ರತಾ ನಿಯಮ ಉಲ್ಲಂಘನೆ ಸೇರಿದಂತೆ ನಾನಾ ಪ್ರಕರಣಗಳನ್ನು ದಾಖಲಿಸಲಾಗಿತ್ತು.



