ಅತ್ಯಾಧುನಿಕ ಯುದ್ಧ ವಿಮಾನ ಹಾಗೂ ಡ್ರೋಣ್ ಸೇರಿದಂತೆ 42 ಯುದ್ಧ ವಿಮಾನಗಳು ಇರಾನ್ ದಾಳಿಯ ವೇಳೆ ಪತನಗೊಂಡಿವೆ ಎಂದು ಅಮೆರಿಕದ ವರದಿ ಹೇಳಿದೆ.
ಕದನ ವಿರಾಮ ಅಂತ್ಯಗೊಳ್ಳುತ್ತಿದ್ದು, ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಎಚ್ಚರಿಕೆ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದ್ದು, ಅಮೆರಿಕಕ್ಕೆ ಭಾರೀ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.
ಇರಾನ್ ಮೇಲೆ ದಾಳಿಯ ವೇಳೆ ಅಮೆರಿಕದ ವಾಯುಪಡೆಯ ಪ್ರಮುಖ ಹಾಗೂ ಅತ್ಯಾಧುನಿಕ ಯುದ್ಧ ವಿಮಾನಗಳು ಪತನಗೊಂಡಿದ್ದು, 29 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ ಎಂದು ಪೆಂಟಗಾನ್ ವರದಿ ಹೇಳಿದೆ.
ಮತ್ತೆ ಯುದ್ಧ ಆರಂಭಿಸಲು ಅಮೆರಿಕ ಸಾಕಷ್ಟು ಕಾಲವಕಾಶ ಪಡೆದುಕೊಂಡಿದ್ದು, ಕದನ ವಿರಾಮದ ಅವಧಿಯಲ್ಲಿ ಯುದ್ಧ ವಿಮಾನಗಳ ದುರಸ್ಥಿ ಹಾಗೂ ವಿಮಾನಗಳ ಬದಲಾವಣೆ ಮಾಡುತ್ತಿದೆ ಎಂದು ವರದಿಗಳು ಹೇಳಿವೆ.
ಈಗಲ್ ಫೈಟರ್ ಜೆಟ್ ಎಫ್-15 ಇ, ಬೆಳಕಿನ ವೇಗದಲ್ಲಿ ಸಂಚರಿಸುವ ಎಫ್-35ಎ-2, ಥಂಟರ್ ಬೋಲ್ಟ್ ಎ-10-2, 7 ನೆಲದ ಮೇಲೆ ದಾಳಿ ನಡೆಸುವ ಕೆಸಿ -135, ದಾಳಿಯ ಮುನ್ಸೂಚನೆ ನೀಡುವ 2 ಎಂಸಿ-130ಜೆ ಕಮಾಂಡೊ-2, ಎಚ್ ಎಚ್ 60 ಡಬ್ಲೂ ಜಾಲಿ ಗ್ರೀನ್ 2 ಕಂಬಾಟ್ ವಿಮಾನಗಳು ಪತನಗೊಂಡಿವೆ.



