Thursday, May 21, 2026
Google search engine
Homeದೇಶಯುದ್ಧ ಭೀತಿ: ಇಂದು ಪ್ರಧಾನಿ ತುರ್ತು ಸಭೆ

ಯುದ್ಧ ಭೀತಿ: ಇಂದು ಪ್ರಧಾನಿ ತುರ್ತು ಸಭೆ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ದ ಆರಂಭವಾಗುವ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಚಿವರ ತುರ್ತ ಸಭೆ ಕರೆದಿದ್ದು, ಎಲ್ಲಾ ಸಚಿವರು ದೆಹಲಿಯಲ್ಲಿ ತಂಗುವಂತೆ ಸೂಚಿಸಲಾಗಿದೆ.

ವಿದೇಶೀ ಪ್ರವಾಸ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಪ್ರಧಾನಿ ಮೋದಿ ತುರ್ತು ಸಭೆ ಕರೆದಿದ್ದು, ದೆಹಲಿಯ ಶಿವತೀರ್ಥದಲ್ಲಿ ಗುರುವಾರ ಸಂಜೆ 4 ಗಂಟೆಗೆ ನಡೆಯಲಿದೆ.

ವಿದೇಶದಿಂದ ಮರಳುತ್ತಿದ್ದಂತೆ ಪ್ರಧಾನಿ ಪ್ರತಿಯೊಂದು ಖಾತೆಯ ಸಚಿವರು, ಸಹಾಯಕ ಸಚಿವರು ಹಾಗೂ ಸ್ವತಂತ್ರ ಖಾತೆ ಹೊಂದಿರುವ ಸಚಿವರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಪ್ರಧಾನಿ ಮದ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ದೇಶದಲ್ಲಿ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments