ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಹಾಗೂ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೃಕೃತ್ಯ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದೆ ಕೇಂದ್ರ ಸಚಿವರು ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಕಟುವಾಗಿ.
ಯಾವುದೋ ಒಂದು ವಿಷಯ ಇಟ್ಟುಕೊಂಡು ಸುದ್ದಿಯಲ್ಲಿರುವುದಕ್ಕೆ ಕಾಂಗ್ರೆಸ್ನವರು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಸ್ವಲ್ಪ ದಿನ ಮನರೇಗಾ ಬಗ್ಗೆ ಅವರು ಮಾತನಾಡಿದ್ದೆ ಮಾತನಾಡಿದ್ದು. ಈಗ ಎಸ್’ಐಆರ್ ಎಂದು ಹೊರಟಿದ್ದಾರೆ. ಇವರಿಗೆ ಜನ ಕೆಲಸ ಮಾಡಲು ಅವಕಾಶ ಕೊಟ್ಟರು. ಆದರೆ ಜನರ ಕೆಲಸ ಮಾಡುವ ಮನೋಭಾವ ಇವರಿಗಿಲ್ಲ. ಈ ವಿಷಯ ಎತ್ತಿಕೊಂಡು ಜನರನ್ನು ಡೈವರ್ಟ್ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ಬಿಡದಿ ಚರ್ಚೆಗೆ ಕರೆದವರು ವಸೂಲಿಯಲ್ಲಿ ಬ್ಯುಸಿ ಇದ್ದಾರೆ!
ಬಿಡದಿ ಟೌನ್ ಶಿಪ್ ವಿಚಾರವಾಗಿ ಬಹಿರಂಗ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಮೊದಲು ಬಿಡದಿ ಟೌನ್ ಶಿಪ್ ಬಗ್ಗೆ ಚರ್ಚೆಗೆ ಆಹ್ವಾನ ಕೊಟ್ಟಿದ್ದು ಅವರು. ಅದಕ್ಕೆ ನಾನು ಸಿದ್ಧ ಎಂದು ಹೇಳಿದ್ದೇನೆ. ಪಾಪ ಅವರು ತುಂಬಾ ಬ್ಯುಸಿ ಇದ್ದಾರೆ. ದಿನವೂ ಇಷ್ಟು ಅಂತ ವಸೂಲಿ ಆಗಲೇಬೇಕು ಅಂತ ಅವರು ಬ್ಯುಸಿ ಇದ್ದಾರೆ. ಮೀಟರ್ ಲೆಕ್ಕ ಹಾಕೋದು, ರೇಟ್ ಫಿಕ್ಸ್ ಮಾಡೋದು ಅವರ ಕೆಲಸ. ಆ ಬ್ಯುಸಿನಲ್ಲಿ ನಾನಿಲ್ಲ. ದಿನವು ಅರ್ಧ ರಾತ್ರಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲವೇ? ದಿನಕ್ಕೆ ಇಷ್ಟು ವಸೂಲಿ ಆಗಬೇಕೆಂದು ಫಿಕ್ಸ್ ಮಾಡಿಕೊಂಡು ಜೀವನ ಮಾಡುವವರು ಅವರು. ಹೀಗಾಗಿ ಅವರು ಒಂದೊಂದು ಸೆಕೆಂಡ್ ಗೂ ಬ್ಯುಸಿ ಇರುತ್ತಾರೆ. ಜನಗಳ ಮುಂದೆ ಚರ್ಚೆ ಮಾಡುವುದಕ್ಕೆ ನನ್ನದು ಯಾವುದೇ ಅಭ್ಯಂತರ ಇಲ್ಲ ಎಂದು ಕುಟುಂಬ ಕುಟುಕಿದರು.
ಕೇಂದ್ರದಲ್ಲಿ ನನ್ನದು ಸಣ್ಣ ಇಲಾಖೆ. ನಾನೇನು ಅಲ್ಲಿ ಕ್ರಾಂತಿ ಮಾಡುವುದು ಬೇಕಿಲ್ಲ. ಕ್ರಾಂತಿ ಮಾಡುವವರು ಬಹಳ ಬ್ಯುಸಿ ಇದಾರೆ.. ಅವರು ಬಂದರೆ ಬಿಡದಿಗೆ ಹೋಗಿ ಚರ್ಚೆ ಮಾಡೋಣ ಎಂದು ತಿರುಗೇಟು ನೀಡಿದರು ಕುಮಾರಸ್ವಾಮಿ ಅವರು.
ಅಕ್ಕಿ ಕೇಂದ್ರ ಸರ್ಕಾರದ್ದು, ಪುಕ್ಕಟೆ ಪ್ರಚಾರ ರಾಜ್ಯಸರಕಾರದ್ದು
ಕೇಂದ್ರ ಸರಕಾರ ಮುಂಗಡವಾಗಿ ಎರಡು ತಿಂಗಳ ಅಕ್ಕಿ ತೆಗೆದುಕೊಳ್ಳಿ ಎಂದು ಹೇಳಿದೆ ಎಂದು ಸ್ವತಃ ನೀವೇ ಮಾಧ್ಯಮದವರು ಹೇಳಿದ್ದೀರಿ. ಆದರೆ ಬಡವರ ಹಸಿವು ನೀಗಿಸೋದು ನಾವು ಎಂದು ಜಾಹೀರಾತು ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಅಕ್ಕಿ ಕೊಡುತ್ತಿದೆ. ಕೇಂದ್ರ ಕೊಡುತ್ತಿರುವ ಅಕ್ಕಿಯನ್ನು ಹಂಚಿ ಇವರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ತುಮಕೂರಿನಲ್ಲಿ ಇತ್ತೀಚೆಗೆ ಸಮಾವೇಶ ಮಾಡಿದರು. ಆ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಯಾಕೆ ಹಾಕಿದರ ಕೇಂದ್ರದಿಂದ ಕೊಡುವಂತಹ ಹಲವಾರು ಯೋಜನೆಗಳ ಸಮಾವೇಶ ಅದಾಗಿತ್ತು. ಅದಕ್ಕೆ ನನ್ನ ಹೆಸರನ್ನು ಹಾಕಿದ್ದರು. ಹಣ, ಅನುದಾನ, ಕಾರ್ಯಕ್ರಮ ಕೇಂದ್ರದ್ದು, ಬಿಟ್ಟಿ ಪ್ರಚಾರ ಇವರದ್ದು ಎಂದು ಅವರು ದೂರಿದರು.
ರಾಜ್ಯದ ಹಲವಾರು ಪ್ರದೇಶದಲ್ಲಿ ಮಳೆ, ಬಿರುಗಾಳಿಯಿಂದ ಬಾಳೆ, ತೆಂಗು ನಾಶ ಆಗಿದೆ. ಎಲ್ಲಾದರೂ ಒಂದು ಕಡೆ ಸರಕಾರದವರು ಹೋಗಿದ್ದಾರ? ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ ಕಾಂಗ್ರೆಸ್ಸಿನರು ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದಾರೆ. ಜನಕ್ಕಿಂತ ಇವರಿಗೆ ರಾಜಕೀಯವೇ ದೊಡ್ಡದಾಗಿದೆ ಎಂದು ಕುಮಾರಸ್ವಾಮಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರಾಜ್ಯಸಭೆಗೆ ನಾವು ಯಾರನ್ನು ಮರು ಆಯ್ಕೆ ಮಾಡಿ ಎಂದು ಕೇಳಿಲ್ಲ;
ದೇವೇಗೌಡರು ಮತ್ತೆ ರಾಜ್ಯಸಭೆಗೆ ಆಯ್ಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಕುಮಾರಸ್ವಾಮಿ ಅವರು; ನಾವು ಯಾರನ್ನೂ ಮರು ಆಯ್ಕೆ ಬಗ್ಗೆ ಕೇಳಿಲ್ಲ. ನಮ್ಮ ಮಿತ್ರಪಕ್ಷಕ್ಕೆ ವಿಧಾನಸಭೆಯಲ್ಲಿ 63 ಸ್ಥಾನಗಳಿವೆ. ಹೀಗಾಗಿ ಬಿಜೆಪಿ ಅವರೇ ನಿರ್ಧರಿಸುತ್ತಾರೆ. ನಾನಾಗಲಿ,ದೇವೇಗೌಡರಾಗಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಚರ್ಚೆ ಮಾಡೋಕೂ ಹೋಗಿಲ್ಲ. ದೇವೇಗೌಡರ ಅವಶ್ಯಕತೆ ಬಗ್ಗೆ ದೆಹಲಿ ಮಟ್ಟದಲ್ಲಿ ತೀರ್ಮಾನ ಮಾಡಲಿ. ನಾವು ಇನ್ನೊಬ್ಬರಿಗೆ ತಪ್ಪಿಸಿ ನಮಗೆ ಕೊಡಿ ಎಂದು ಕೇಳಲ್ಲ ಎಂದರು.
ಜಿಬಿಎ ಚುನಾವಣೆಗೆ ತಯಾರಿ; ಹೆಚ್ಡಿಕೆ ಸಭೆ
ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆ ತಯಾರಿ ಕುರಿತಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ನಾಯಕರ ಸಭೆ ನಡೆಸಿದರು.
ನಗರದ ಜನಪ್ರತಿನಿಧಿಗಳು, ಪಕ್ಷದ ಹಿರಿಯ ಮುಖಂಡರು ಹಾಜರಿದ್ದ ಸಭೆಯಲ್ಲಿ ಜಿಬಿಎ ಚುನಾವಣೆ ಸಿದ್ಧತೆ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.
ಮತಗಟ್ಟೆ ಹಾಗೂ ವಾರ್ಡುವಾರು ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಮುಖಂಡರಿಗೆ ಕಠಿಣ ಸೂಚನೆಗಳನ್ನು ಕೊಟ್ಟ ಸಚಿವರು; ಚುನಾವಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಗಡುವು ನೀಡಿದೆ. ಹೇಗಾದರೂ ಮಾಡಿ ಚುನಾವಣೆಯನ್ನು ಮುಂದಕ್ಕೆ ಹಾಕಿಕೊಂಡು ಹೋಗಬೇಕು ಎಂದುಕೊಂಡಿದ್ದ ಸರಕಾರಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಬೆಂಗಳೂರು ಜನರ ಹಕ್ಕನ್ನು ಕಸಿಯುವ ದುಸ್ಸಾಹಸ ಮಾಡಿತು ಎಂದು ಮುಖಂಡರಿಗೆ ಮನವರಿಗೆ ಮಾಡಿಕೊಟ್ಟರು.



