Monday, May 25, 2026
Google search engine
Homeದೇಶಪೆಟ್ರೋಲ್‌, ಡೀಸೆಲ್‌ ದರ 2.50 ರೂ ಏರಿಕೆ. 11 ದಿನದಲ್ಲಿ 4ನೇ ಬಾರಿ ಜಿಗಿತ

ಪೆಟ್ರೋಲ್‌, ಡೀಸೆಲ್‌ ದರ 2.50 ರೂ ಏರಿಕೆ. 11 ದಿನದಲ್ಲಿ 4ನೇ ಬಾರಿ ಜಿಗಿತ

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಲೀಟರ್‌ ಗೆ ತಲಾ 2 ರೂ. ಏರಿಕೆ ಮಾಡಲಾಗಿದ್ದು, ಇದು ಕಳೆದ 11 ದಿನದಲ್ಲಿ ಸತತ 4ನೇ ಬಾರಿ ಏರಿಕೆಯಾಗಿದೆ.

ಸೋಮವಾರ ಬೆಳಿಗ್ಗೆಯಿಂದಲೇ ಪೆಟ್ರೋಲ್‌ ದರ ಲೀಟರ್‌ ಗೆ 2.61 ರೂ. ಹಾಗೂ ಡೀಸೆಲ್‌ ದರ ಲೀಟರ್‌ ಗೆ 2.71 ರೂ. ಏರಿಕೆ ಮಾಡಲಾಗಿದೆ. ಇದರಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ 100ರ ಗಡಿ ದಾಟಿದ್ದು, 102.12 ಏರಿಕೆ ಆದಂತಾಗಿದೆ.

ಹರ್ಮುಜ್‌ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕ ಮತ್ತು ಇರಾನ್‌ ನಡುವೆ ಬಿಕ್ಕಟ್ಟು ಮುಂದುವರಿದ ಕಾರಣ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇದೆ.

ಕೇಂದ್ರ ಸರ್ಕಾರ ಬೆಲೆ ಇಳಿಸಲು ತೆರಿಗೆ ಕಡಿಮೆ ಮಾಡದೇ ಇರುವುದು ಹಾಗೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದು ಪೆಟ್ರೋಲ್‌ ಡೀಸೆಲ್‌ ದರ ಏರಿಕೆಯ ಬಿಸಿ ನಾಗರಿಕರನ್ನು ತಟ್ಟುವಂತಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದ ದೇಶದಲ್ಲಿ ಸರಕು ಸಾಗಾಟ ದುಬಾರಿ ಆಗಲಿದ್ದು, ಇದರಿಂದ ಹಣ್ಣು, ತರಕಾರಿ, ಹಾಲು ಮುಂತಾದ ಹಲವು ದಿನಬಳಕೆಯ ವಸ್ತುಗಳು ದುಬಾರಿ ಆಗಲಿದ್ದು, ಇದರಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ 102.12 ರೂ. ತಲುಪಿದರೆ, ಕೋಲ್ಕತಾದಲ್ಲಿ 113.31 ರೂ., ಮುಂಬೈನಲ್ಲಿ 111.21, ರೂ. ಹಾಗೂ ಚೆನ್ನೈನಲ್ಲಿ 107.77 ರೂ. ಏರಿಕೆಯಾಗಿದೆ. ಡೀಸೆಲ್‌ ದರ ದೆಹಲಿಯಲ್ಲಿ 95.20 ರೂ., ಕೋಲ್ಕತಾದಲ್ಲಿ 99.21 ರೂ., ಮುಂಬೈನಲ್ಲಿ 97.93 ರೂ. ಹಾಗೂ ಚೆನ್ನೈನಲ್ಲಿ 99.55 ರೂ.ಗೆ ತಲುಪಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments