Wednesday, May 27, 2026
Google search engine
Homeಕ್ರೀಡೆದಾಖಲೆ ಗೆಲುವಿನೊಂದಿಗೆ ಸತತ 2ನೇ ಬಾರಿ ಐಪಿಎಲ್‌ ಫೈನಲ್‌ ಗೆ ಹಾಲಿ ಚಾಂಪಿಯನ್‌ ಆರ್‌ ಸಿಬಿ...

ದಾಖಲೆ ಗೆಲುವಿನೊಂದಿಗೆ ಸತತ 2ನೇ ಬಾರಿ ಐಪಿಎಲ್‌ ಫೈನಲ್‌ ಗೆ ಹಾಲಿ ಚಾಂಪಿಯನ್‌ ಆರ್‌ ಸಿಬಿ ಲಗ್ಗೆ

ಟೂರ್ನಿಯುದ್ದಕ್ಕೂ ಚಾಂಪಿಯನ್‌ ಆಟ ಪ್ರದರ್ಶಿಸಿದ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 92 ರನ್‌ ಗಳಿಂದ ಗುಜರಾತ್‌ ಟೈಟಾನ್ಸ್‌ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿ ಐಪಿಎಲ್‌ ಫೈನಲ್‌ ಗೆ ಲಗ್ಗೆ ಹಾಕಿದೆ.

ಧರ್ಮಶಾಲಾದಲ್ಲಿ ಮಂಗಳವಾರ ನಡೆದ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ ಸಿಬಿ 5 ವಿಕೆಟ್‌ ಗೆ 254 ರನ್‌ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಗುಜರಾತ್‌ ಟೈಟಾನ್ಸ್‌ ತಂಡವನ್ನು 19.3 ಓವರ್‌ ಗಳಲ್ಲಿ 162 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್‌ ಸಿಬಿ ಪ್ಲೇಆಫ್‌ ನಲ್ಲಿ ರನ್‌ ಗಳ ಆಧಾರದ ಮೇಲೆ ಅತೀ ದೊಡ್ಡ ಗೆಲುವಿನ ದಾಖಲೆಯೊಂದಿಗೆ ಸತತ 2ನೇ ಬಾರಿ ಫೈನಲ್‌ ಗೆ ಲಗ್ಗೆ ಹಾಕಿತು.

ಆರ್‌ ಸಿಬಿ ತಂಡದ ಮಾರಕ ದಾಳಿಗೆ ತತ್ತರಿಸಿದ ಜಿಟಿ ತಂಡದ ಬ್ಯಾಟ್ಸ್‌ ಮನ್‌ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಗುಜರಾತ್‌ ಪರ ರಾಹುಲ್ ತವಾಟಿಯಾ ‌43 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ ಸಹಾಯದಿಂದ 68 ರನ್‌ ಬಾರಿಸದೇ ಹೋಗಿದ್ದರೆ ತಂಡ ಹೀನಾಯವಾಗಿ ಸೋಲುತ್ತಿತ್ತು.

ಆರ್‌ ಸಿಬಿ ಪರ ಜೇಕಬ್ ಡುಫೆ ‌3 ವಿಕೆಟ್‌ ಪಡೆದು ಮಿಂಚಿದರೆ, ಭುವನೇಶ್ವರ್‌ ಕುಮಾರ್‌, ರಸಿಕ್‌ ಸಲಮ್‌ ಮತ್ತು ಕೃನಾಲ್‌ ಪಾಂಡ್ಯ ತಲಾ 2 ವಿಕೆಟ್‌ ಕಬಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments