ಭಾರತ, ಚೀನಾ ಸೇರಿದಂತೆ 60 ರಾಷ್ಟ್ರಗಳ ಮೇಲೆ ಸುಂಕ ಏರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಈ ಮೂಲಕ ಆಪ್ತ ದೇಶ ಎಂದು ಹೇಳುತ್ತಲೇ ಭಾರತದ ಮೇಲೆ ಬರೆ ಎಳೆಯಲಿದ್ದಾರೆ.
ವಾಷಿಂಗ್ಟನ್ ಆಡಳಿತ ಕಾರ್ಮಿಕರ ಒತ್ತಡ ಬಗೆಹರಿಸಲು ಭಾರತದ ಮೇಲೆ ಹೊಸದಾಗಿ ಶೇ. 12.5 ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮುಂದಿಟ್ಟಿದೆ.
ಹೊಸದಾಗಿ ಮತ್ತೆ ತೆರಿಗೆ ವಿಧಿಸುವ ಪ್ರಸ್ತಾಪ ಟ್ರಂಪ್ ಮುಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಅಥವಾ ಸಹಿ ಆಗಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಈ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.



