Saturday, June 13, 2026
Google search engine
Homeದೇಶಅಸ್ಸಾಂನಲ್ಲಿ ಸೇನಾ ವಿಮಾನ ಪತನ: ವಾಯುಪಡೆಯ 5 ಯೋಧರ ಸಾವು

ಅಸ್ಸಾಂನಲ್ಲಿ ಸೇನಾ ವಿಮಾನ ಪತನ: ವಾಯುಪಡೆಯ 5 ಯೋಧರ ಸಾವು

ಜೋರ್ಗಟ್: ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನಗೊಂಡ ಪರಿಣಾಮ ಐವರು ಯೋಧರು ಮೃತಪಟ್ಟಿದ್ದಾರೆ.

ಜೋರ್ಹತ್‌ನ ರೌರಿಯಾ ಪ್ರದೇಶದಲ್ಲಿರುವ ವಾಯುಪಡೆಯ ವಾಯುನೆಲೆಯಲ್ಲಿ ಇಳಿಯುವಾಗ ಈ ದುರಂತ ಸಂಭವಿಸಿದೆ. AN-32 ವಿಮಾನ ದುರಂತದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಮೃತರನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲಿಂಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಮತ್ತು ಅಗ್ನಿವೀರ್ವಾಯು ಡ್ಯಾನಿಶ್ ಅಲಂ ಎಂದು ಗುರುತಿಸಲಾಗಿದೆ.

ಅಪಘಾತದ ಸ್ಥಳದಿಂದ ಬಂದ ಆರಂಭಿಕ ದೃಶ್ಯಗಳಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಸುತ್ತಲೂ ಐಎಎಫ್ ಸಿಬ್ಬಂದಿ ಇರುವುದನ್ನು ತೋರಿಸಲಾಗಿದೆ. ವಿಮಾನವು ಎರಡು ಭಾಗಗಳಾಗಿ ಮುರಿದುಹೋಗಿರುವುದನ್ನು ಮತ್ತು ವಿಮಾನದ ಮುಂಭಾಗದಿಂದ ಇನ್ನೂ ಹೊಗೆ ಹೊರಬರುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ. ಅಪಘಾತ ಸ್ಥಳದಲ್ಲಿ ಅಗ್ನಿಶಾಮಕ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಭವಿಸಿದಾಗ ಎಎನ್ -32 ವಿಮಾನವು ಜೋರ್ಹತ್‌ನ ರೌರಿಯಾ ಪ್ರದೇಶದಲ್ಲಿರುವ ಐಎಎಫ್ ವಾಯುನೆಲೆಯಲ್ಲಿ ಇಳಿಯುತ್ತಿತ್ತು ಎಂದು ರಕ್ಷಣಾ ವಕ್ತಾರರು ಈ ಮೊದಲು ಮಾಹಿತಿ ನೀಡಿದ್ದರು. ಘಟನೆ ಸಂಭವಿಸಿದಾಗ ಎಎನ್-32 ವಿಮಾನವು ರೌರಿಯಾ ಪ್ರದೇಶದಲ್ಲಿರುವ ವಾಯುಪಡೆಯ ವಾಯುನೆಲೆಯಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

“ಹಿರಿಯ ಐಎಎಫ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸಾವುನೋವುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ” ಎಂದು ಈ ಮೊದಲು ವಕ್ತಾರರು ತಿಳಿಸಿದ್ದರು. ಆದರೆ ಈಗ ಐವರು ಮೃತಪಟ್ಟಿದ್ಧಾರೆ ಎಂದು ದೃಢಪಟ್ಟಿದೆ.

ಎಎನ್-32 ವಿಮಾನದ ವೈಶಿಷ್ಟ್ಯ

ಸೋವಿಯತ್ ಮೂಲದ ಎಎನ್-32 ವಿಮಾನವನ್ನು ಉಕ್ರೇನ್‌ನ ಆಂಟೊನೊವ್ ಡಿಸೈನ್ ಬ್ಯೂರೋ ವಿನ್ಯಾಸಗೊಳಿಸಿದ್ದು ಅವಳಿ ಎಂಜಿನ್ ಲಘು ಮಿಲಿಟರಿ ಸಾರಿಗೆ ವಿಮಾನವಾಗಿದೆ. ಐಎಎಫ್​ ನ ಅವಶ್ಯಕತೆಗಳನ್ನು ಪೂರೈಸಲು ನಿರ್ದಿಷ್ಟವಾಗಿ ಈ ವಿಮಾನ ಅಭಿವೃದ್ಧಿಪಡಿಸಲಾಗಿದೆ.

ವಿಮಾನವು ತೀವ್ರ ಉಷ್ಣವಲಯ ಮತ್ತು ಎತ್ತರದ ಪರ್ವತ ಪರಿಸರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಣೆ ಸಾಮರ್ಥ್ಯ ಹೊಂದಿದೆ. ಶನಿವಾರದ ಘಟನೆಗೆ ಕಾರಣವೇನು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ, ಆದರೆ ಜೋರ್ಹತ್‌ನಲ್ಲಿನ ಹವಾಮಾನವು ಇಂದು ಬೆಳಿಗ್ಗೆ ಸಾಕಷ್ಟು ಕತ್ತಲೆಯಾಗಿತ್ತು, ಆದ್ದರಿಂದ ಅಪಘಾತಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ತನಿಖೆಯಲ್ಲಿ ಸತ್ಯ ಹೊರಬರಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments