Tuesday, June 23, 2026
Google search engine
Homeವಿದೇಶಕತಾರ್ ನಲ್ಲಿ ತೈಲ ಘಟಕ ಸ್ಫೋಟ: ಭಾರತೀಯ ಸೇರಿ 13 ಸಾವು

ಕತಾರ್ ನಲ್ಲಿ ತೈಲ ಘಟಕ ಸ್ಫೋಟ: ಭಾರತೀಯ ಸೇರಿ 13 ಸಾವು

ದೋಹಾ (ಕತಾರ್): ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಭಾರತೀಯರು ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪ್ರಜೆಗಳು ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದು, 66 ಮಂದಿ ಗಾಯಗೊಂಡಿದ್ದಾರೆ ಎಂದು ಕತಾರ್‌ನ ಇಂಧನ ಸಚಿವ ಸಾದ್ ಅಲ್-ಕಾಬಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯಲ್ಲಿ ಎಷ್ಟು ಭಾರತೀಯರು ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ಸಚಿವರು ಯಾವುದೇ ವಿವರಗಳನ್ನು ನೀಡಲಿಲ್ಲ.

ರಾಸ್ ಲಫಾನ್, ಕತಾರ್‌ನ ನೈಸರ್ಗಿಕ ಅನಿಲ ಮಾರಾಟದ ಪ್ರಮುಖ ರಫ್ತು ಟರ್ಮಿನಲ್ ಆಗಿದೆ. ಯುದ್ಧದ ಸಮಯದಲ್ಲಿ ಈ ಪ್ರದೇಶದ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿತ್ತು. ಹಾಗಾಗಿ ಘಟಕವನ್ನು ವಾರಗಳ ಕಾಲ ಮುಚ್ಚಲಾಗಿತ್ತು.

ಭಾನುವಾರ ತಡರಾತ್ರಿ ಬರ್ಜಾನ್ ಸ್ಥಾವರದಲ್ಲಿ ಕಾರ್ಯಾಚರಣೆಗಳನ್ನು ಮರು ಪ್ರಾರಂಭಿಸುವ ಪ್ರಯತ್ನಗಳು ನಡೆಯುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದ್ದು, ಕನಿಷ್ಠ 66 ಜನರು ಗಾಯಗೊಂಡಿದ್ದು, 18 ಮಂದಿ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಹಲವು ದಿನಗಳ ಬಳಿಕ ಬರ್ಜಾನ್ ಸ್ಥಾವರದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳುವ ಪ್ರಯತ್ನ ನಡೆಸಲಾಗುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಬೆಂಕಿ ಕೂಡ ಕಾಣಿಸಿಕೊಂಡಿದೆ. ಘಟನೆಯಲ್ಲಿ ಹಲವು ಕಾರ್ಮಿಕರು ಗಾಯಗೊಂಡರೆ, ಇನ್ನೂ ಕೆಲವರು ಕಾಣೆಯಾಗಿರುವ ಮಾಹಿತಿ ಇದೆ. ಆದರೆ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ”ಎಂದು ಕತಾರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments