Tuesday, June 30, 2026
Google search engine
Homeಕ್ರೀಡೆಫಿಫಾ ರ್ಯಾಂಕಿಂಗ್‌ ನಲ್ಲಿ ಮೆಸ್ಸಿಗೆ 2ನೇ ಸ್ಥಾನ; ರೊನಾಲ್ಡೊ 79ಕ್ಕೆ ಕುಸಿತ!

ಫಿಫಾ ರ್ಯಾಂಕಿಂಗ್‌ ನಲ್ಲಿ ಮೆಸ್ಸಿಗೆ 2ನೇ ಸ್ಥಾನ; ರೊನಾಲ್ಡೊ 79ಕ್ಕೆ ಕುಸಿತ!

ಫಿಫಾ ರ್ಯಾಂಕಿಂಗ್‌ ನಲ್ಲಿ ಫುಟ್ಬಾಲ್‌ ದಂತಕತೆ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್‌ ಮೆಸ್ಸಿ 2ನೇ ಸ್ಥಾನ ಪಡೆದಿದ್ದರೆ, ಮತ್ತೊಬ್ಬ ಸ್ಟಾರ್‌ ಆಟಗಾರ ಪೋರ್ಚುಗಲ್‌ ನ ಕ್ರಿಸ್ಟಿಯಾನೊ ರೊನಾಲ್ಡೊ 79ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅಮೆರಿಕ ಮತ್ತು ಕೆನಡಾ ಸೇರಿದಂತೆ ಮೂರು ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ನಾಕೌಟ್‌ ಹಂತದ ಪಂದ್ಯಗಳು ಆರಂಭವಾದ ಬೆನ್ನಲ್ಲೇ ಪ್ರಕಟಿಸಲಾದ ಫಿಫಾ ರ್ಯಾಂಕಿಂಗ್‌ ಪಟ್ಟಿಯಲ್ಲಿ ಹಲವು ಅಚ್ಚರಿಗಳು ಕಂಡು ಬಂದಿವೆ.

ಮೆಸ್ಸಿ ಹ್ಯಾಟ್ರಕ್‌ ಸೇರಿದಂತೆ 6 ಗೋಲು ಬಾರಿಸಿ ವಿಶ್ವಕಪ್‌ ನಲ್ಲಿ ಅತೀ ಹೆಚ್ಚು ಗೋಲುಗಳ ಸರದಾರ ಸೇರಿದಂತೆ ಹಲವು ದಾಖಲೆ ಬರೆದಿದ್ದರೂ ನಂ.1 ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ. ಫ್ರಾನ್ಸ್ ನ ಕೈಲಿಯಾನ್‌ ಮೆಬೆಪೆ, ಬ್ರೆಜಿಲ್‌ನ ವಿನಿಸಿಯಸ್‌ ಜೂನಿಯರ್‌ ಮತ್ತು ಎರ್ಲಾಂಗ್‌ ಹಾಲಂಡ್‌ ಜಂಟಿ 4ನೇ ಸ್ಥಾನ ಹಂಚಿಕೊಂಡಿದ್ದಾರೆ.

ಮಾಜಿ ಚಾಂಪಿಯನ್‌ ಜರ್ಮನಿಯ ಡೆನಿಜ್‌ ಉನ್ದಾವ್‌ ಅಗ್ರಸ್ಥಾನ ಅಲಂಕರಿಸಿ ಅಚ್ಚರಿ ಮೂಡಿಸಿದ್ದಾರೆ. ದುರಂತ ಅಂದರೆ ಅವರ ತಂಡ ಉರುಗ್ವೆ ವಿರುದ್ಧ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಡೆನಿಜ್‌ ಅಕ್ರಮಣಕಾರಿ ಆಟದಲ್ಲಿ 8.36, ಕ್ರಿಯಾಶೀಲ ಆಟಕ್ಕೆ 6.78 ಮತ್ತು ರಕ್ಷಣಾತ್ಮಕ ಆಟಕ್ಕಾಗಿ 4.7೭ ಅಂಕ ಗಳಿಸಿದ್ದಾರೆ. ಮೆಸ್ಸಿ ಆಕ್ರಮಣಕಾರಿ ಆಟಕ್ಕೆ 8.34, ಕ್ರಿಯಾಶೀಲ ಆಟಕ್ಕೆ 6.43 ಮತ್ತು ರಕ್ಷಣಾತ್ಮಕ ಆಟಕ್ಕಾಗಿ 5.14 ಅಂಕ ಕಲೆಹಾಕಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಮೆಬೆಪೆ ಹಾಗೂ ವಿನಿಸಿಯಸ್ ಆಕ್ರಮಣಕಾರಿ ಆಟಕ್ಕೆ 8.13, ಕ್ರಿಯಾಶೀಲ ಆಟಕ್ಕೆ 7.25 ಮತ್ತು ರಕ್ಷಣಾತ್ಮಕ ಆಟಕ್ಕಾಗಿ 4.59 ಅಂಕ ಕಲೆಹಾಕಿ ಜಂಟಿ ಸ್ಥಾನ ಪಡೆದರೂ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಆಕ್ರಮಣಕಾರಿ ಆಟಕ್ಕೆ 5.27, ಕ್ರಿಯಾಶೀಲ ಆಟಕ್ಕೆ 4.98 ಮತ್ತು ರಕ್ಷಣಾತ್ಮಕ ಆಟಕ್ಕಾಗಿ 4.74 ಅಂಕ ಕಲೆಹಾಕಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments