Friday, September 25, 2026
Google search engine
Homeರಾಜ್ಯಐಹೊಳೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು, 6 ಜನರಿಗೆ ಗಾಯ

ಐಹೊಳೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು, 6 ಜನರಿಗೆ ಗಾಯ

ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನಿಬ್ಬರು ಐಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಡಿಲು ಬಡಿದು ಗಾಯಗೊಂಡು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಅವರು ಬೇಟಿ ನೀಡಿ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ವೈದ್ಯರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಯಾವುದೇ ಕೊರತೆಯಾಗದಂತೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಐಹೊಳೆ ಗ್ರಾಮದಲ್ಲಿ ಸಿಡಿಲು ಬಡಿದು ಕಾಟಾಪೂರ ಗ್ರಾಮದ ಭರಮಪ್ಪ ಮಲ್ಲಪ್ಪ ಕಂಡೇಕರ (24) ಹಾಗೂ ಐಹೊಳೆ ಗ್ರಾಮದ ರಾಮವ್ವ ಗಂಡ ದ್ಯಾಮಪ್ಪ ಹೋಳಗೆ (68) ಮೃತಪಟ್ಟಿದ್ದಾರೆ. ಸಿಡಿಲಿನಿಂದ ಗಾಯಗೊಂಡ ಕಾಟಾಪೂರ ಗ್ರಾಮದ ಮುತ್ತಪ್ಪ ಮಲ್ಲಪ್ಪ ಕಂಡೇಕರ (70), ಜ್ಯೋತಿ ಕಳಕಪ್ಪ ಕಂಡೇಕರ (32) ಹಾಗೂ ಐಹೊಳೆ ಗ್ರಾಮದ ಜ್ಯೋತಿ ಶರಣಪ್ಪ ಕುರಿ (32), ರೇಣವ್ವ ಹನಮಂತ ಸುಟ್ಟನ್ನವರ (35) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಇದೇ ಘಟನೆಯಲ್ಲಿ ಗಾಯಗೊಂಡ ಕಾಟಾಪೂರ ಗ್ರಾಮದ ನಾಗವ್ವ ಪರಸಪ್ಪ ಕಂಡೇಕರ ಹಾಗೂ ಸಾವಂತರವ್ವ ಯಲ್ಲಪ್ಪ ಕಂಡೇಕರ ಅವರು ಐಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments