Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ರಾಜ್ಯ

ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
5 ನಿಮಿಷ ಓದು 620 ವೀಕ್ಷಣೆಗಳು
dk shivakumar

ಬೆಂಗಳೂರು: ರಾಜ್ಯದ ನೂತನ ಕಾಮಗಾರಿಗಳನ್ನು ಕೈಗೆತ್ತುಕೊಳ್ಳುವುದು ಮಾತ್ರವಲ್ಲದೆ, ಆದ್ಯತೆಯ ಮೇರೆಗೆ ಭೂಮಿಗೆ ನೀರುಣಿಸುವುದು ಹಾಗೂ ಬಾಯಾರಿದ ಗ್ರಾಮಗಳಿಗೆ ನೀರು ಹರಿಸುವ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

​ಜಲಸಂಪನ್ಮೂಲ ಇಲಾಖೆಯಲ್ಲಿನ ವಿವಿಧ ನಿಗಮಗಳ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಿಗಮಗಳ ಉಪಾಧ್ಯಕ್ಷರೂ ಆಗಿರುವ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಬಾಕಿ ಬಿಲ್ಲುಗಳನ್ನು ಬಿಡುಗಡೆಗೊಳಿಸುವುದು, ಶಾಸಕರುಗಳಿಗೆ ಆದ್ಯತೆಯ ಮೇರೆಗೆ ಕಾಮಗಾರಿ ನೀಡುವುದು, ನೂತನ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಇತಿಹಾಸ ಬರೆದಿದೆ.

​ಸಭೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ

​ನೀರಾವರಿ ಯೋಜನೆಗಳಿಗೆ ಮಾತ್ರವೇ ಇಲಾಖೆ ಹಣ ವ್ಯಯಿಸಬೇಕು. ರಸ್ತೆ, ಯುಜಿಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನಗರಾಭಿವೃದ್ಧಿ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ವಹಿಸಬೇಕು. ಈ ಬಗ್ಗೆ ಸರಕಾರದ ಕಾರ್ಯದರ್ಶಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವಂತೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಸೂಚನೆ ನೀಡಿದರು.

​ಇಲಾಖೆ ವ್ಯಾಪ್ತಿಯಲ್ಲಿನ ಮೆಷಿನರಿಗಳಿಗೆ ಹಾಗೂ ಇನ್‌ಫ್ರಾಸ್ಟ್ರಕ್ಚರ್‌ಗಳಿಗೂ ವಿಮೆ ಮಾಡಿಸುವುದು, ಕೋರ್ಟ್, ಅಗ್ನಿಶಾಮಕ ಠಾಣೆ ನಿರ್ಮಾಣ ಸೇರಿದಂತೆ ಸರಕಾರಿ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಜಲಸಂಪನ್ಮೂಲ ಇಲಾಖೆಯು ಹಸ್ತಾಂತರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

​ಕಾಲುವೆಗಳ ಮೂಲಕ ಅನಧಿಕೃತವಾಗಿ ನೀರು ಪಡೆಯುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಕಳ್ಳತನ ನಡೆಯುವ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕೂಡಲೇ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಿರಿ ಎಂದು ಮುಖ್ಯಮಂತ್ರಿಗಳೊಂದಿಗೆ ಸಚಿವರು ಸೂಚನೆ ನೀಡಿದರು.

​ಜಲಸಂಪನ್ಮೂಲ ಇಲಾಖೆಗಳ ಆರ್ಥಿಕ ಬಲವರ್ಧನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಅನುದಾನ (ರಾಯೆಲ್ಟಿ) ಪಡೆಯಬೇಕು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ KMREC ಎಂಡಿಗೆ ಮಾಹಿತಿ ನೀಡಬೇಕು ಎಂದು ನಿಗಮಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಯಿತು.

ಬ್ಯಾರೇಜ್ ಸೇರಿದಂತೆ ಕೆಲ ಯೋಜನೆಗಳನ್ನು ಲೆಕ್ಕದಲ್ಲಿ ತೋರಿಸಿದರೆ ಸಾಲದು. ನಾಲೆ, ಸೇತುವೆ ಶಿಥಿಲಗೊಂಡಿರುವುದಕ್ಕೆ ಸೂಕ್ತ ದಾಖಲೆಯ ಫೋಟೊ ತೋರಿಸಬೇಕು. ಮುಂದಿನ ಎಲ್ಲ ಕಾಮಗಾರಿಗಳಿಗೂ ಸೂಕ್ತ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದರು.

​ಕೃಷ್ಣಾ ಭಾಗ್ಯ ಜಲ ನಿಗಮ
​ಈ ನಿಗಮದಲ್ಲಿ ಒಟ್ಟು 52 ವಿಷಯಗಳು ಸಭೆಯಲ್ಲಿ ಮಂಡನೆಯಾಗಿದ್ದು, 9 ಶಾಸನಬದ್ಧ ವಿಷಯಗಳು ಚರ್ಚೆಯಾದವು. ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನೆ, ಮಸ್ಕಿ ತಾಲೂಕಿನ ಬಲದಂಡೆ ಕಾಲುವೆ ನೀರಾವರಿ ಯೋಜನೆ, ಕೆರೂರು ಏತ ನೀರಾವರಿ ಯೋಜನೆಗೆ, ಬೀಳಗಿ ತಾಲೂಕಿನ ಕೃಷ್ಣಾ ಬ್ಯಾರೇಜ್ ಅಡ್ಡಲಾಗಿನ ರಿಸರ್ವ್ ಡ್ಯಾಂ ಬಳಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಸಭೆ ಅನುಮೋದನೆ ನೀಡಿದೆ.
ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆಯಡಿ ಬರುವ ಕಾಲುವೆ ಜಾಲ ನಿರ್ಮಾಣ, ದುರಸ್ತಿ ಕಾಮಗಾರಿ, ಕಾಲುವೆ ಆಧುನೀಕರಣಕ್ಕೆ 71 ಲಕ್ಷ ರೂಪಾಯಿಗಳ ಅನುಮೋದನೆ ನೀಡಲಾಯಿತು.
​ರೋಣ ತಾಲೂಕಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆಯೊಂದಿಗೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಸ್ಕಾಡಾ ಅಳವಡಿಸುವ ಸಂಬಂಧ ಕೇಂದ್ರ ಸರಕಾರಕ್ಕೆ ಯೋಜನಾ ವಿವರ ಕಳುಹಿಸುವಂತೆ ಸಭೆ ನಿರ್ಣಯಿಸಿತು.
​ಯಲಬುರ್ಗಾ-ಕುಕನೂರು ತಾಲೂಕಿನ 19 ಕೆರೆಗಳನ್ನು ಕೃಷ್ಣಾ ನದಿಯಿಂದ ಲಿಫ್ಟ್ ಮಾಡಿ ತುಂಬಿಸುವ ಯೋಜನೆಗೆ ಶೇ. 5 ರಷ್ಟು ದರ ಏರಿಕೆ ಇಲ್ಲವೇ ಮರು ಟೆಂಡರ್ ಕರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

​ನಿಗಮದಲ್ಲಿ ನೂತನ 6 ಯೋಜನೆಗಳಿಗೆ 2,046 ಕೋಟಿ ರೂ.ಗಳ ಶಿಫಾರಸ್ಸು ಇಡಲಾಗಿತ್ತು.

ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಕಾಮಗಾರಿಗಳ ಕಾಲುವೆಗಳಿಗೆ ಲಿಫ್ಟ್ ಮೂಲಕ ನೀರು ಹರಿಸಲು 2 ವರ್ಷ ಹಾಗೂ ಗುರುತ್ವಾಕರ್ಷಣೆ ಮೂಲಕ ನೀರು ನೀಡಲು 6 ತಿಂಗಳ ಗಡುವು ನೀಡಲಾಯಿತು.

​ಕೃಷ್ಣಾ ಮೇಲ್ದಂಡೆ ಯೋಜನೆಯ ಯೂನಿಟ್ 3 ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿನ ಸಂತ್ರಸ್ತರಿಗಾಗಿ ನಿರ್ಮಿಸಿರುವ ಪುನರ್ವಸತಿಯ ಲೇಔಟ್‌ಗಳಲ್ಲಿನ ಮೂಲಸೌಲಭ್ಯ ನೀಡಲು ವಾಣಿಜ್ಯ ಮಳಿಗೆ ನಿರ್ಮಿಸಲು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

​ಕರ್ನಾಟಕ ನೀರಾವರಿ ನಿಗಮ
ನಿಗಮದ ವ್ಯಾಪ್ತಿಯ ​ಯೋಜನೆಯಲ್ಲಿ ಒಟ್ಟು 25 ವಿಷಯಗಳು ಮಂಡನೆಯಾದವು.

ಒಂದೇ ಜಿಲ್ಲೆಗೆ ಎರೆಡೆರಡು ನಿಗಮಗಳು ಕಾಮಗಾರಿ ನಡೆಸಲಿವೆ. ಅದರಲ್ಲೂ ಕರ್ನಾಟಕ ನೀರಾವರಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಯೋಜನೆಗಳು ಓವರ್‌ಲ್ಯಾಪ್ ಆಗುತ್ತಿವೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಹೀಗಾಗಿ ನಿಗಮಗಳ ವ್ಯಾಪ್ತಿಯನ್ನು ಸ್ಟ್ರೀಮ್‌ಲೈನ್‌ಗೆ ತರಲು ಸಭೆಯು, ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲು ಒಮ್ಮತದ ಸಹಮತ ವ್ಯಕ್ತವಾಯಿತು.

​ಕಾಲುವೆ ಆಧುನೀಕರಣ ಕಾಮಗಾರಿಗಳನ್ನು ಪೀಸ್‌ವರ್ಕ್‌ನಲ್ಲಿ ಪ್ಲಾನ್ ರೂಪಿಸಿದ ಎಂಜಿನಿಯರ್ ಅನ್ನು ಅಮಾನತುಗೊಳಿಸಿ, 20 ವರ್ಷದಿಂದ ನಡೆಯುತ್ತಿರುವ ಬಳ್ಳಾರಿ ನಾಲಾ ಯೋಜನೆಯನ್ನು ಸ್ಥಗಿತಗೊಳಿಸಿ, ಅರಣ್ಯ ಇಲಾಖೆ ಅನುಮತಿ ಪಡೆದ ಬಳಿಕ ಯೋಜನೆ ರೂಪಿಸುವಂತೆ ಸಚಿವರ ಸಲಹೆ ಮೇರೆಗೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

​ಬೆಂಗಳೂರು ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೈಬಿಡಲಾಯಿತು.
​ಸೋಲಾರ್ ಪಾರ್ಕ್ ನಿರ್ಮಾಣ ಸಂಬಂಧ ನಿಗಮಗಳಲ್ಲಿ ಬಳಕೆಯಾಗದ ಭೂಮಿಯನ್ನು ಗುತ್ತಿಗೆಗೆ ನೀಡಿ, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಕಾಮಗಾರಿಗಳನ್ನು ಇನ್ನಷ್ಟು ವೇಗಗೊಳಿಸಬೇಕು ಎಂದು ಸೂಚನೆ ನೀಡಲಾಯಿತು.

​ಯೋಜನಾ ತಾಂತ್ರಿಕ ಉಪಸಮಿತಿ ಶಿಫಾರಸು ಮಾಡಿರುವ ಕಾಮಗಾರಿಗಳ ವೆಚ್ಚವನ್ನು ಶೇ. 5 ಕ್ಕಿಂತ ಹೆಚ್ಚಿಸುವಂತಿಲ್ಲ. ನವಲಗುಂದದಲ್ಲಿ ಕುಡಿಯುವ ನೀರಿಗಾಗಿ 8 ಟ್ಯಾಂಕ್‌ಗಳ ನಿರ್ಮಾಣ, ಭದ್ರಾವತಿಯಲ್ಲಿ ಜಿಪಂನ ಟ್ಯಾಂಕ್‌ಗಳಿಗೆ ನೀರು ತುಂಬುವುದು, ಭದ್ರಾವತಿಯಲ್ಲಿ ನೆರೆ ತಡೆಯಲು ಗೋಡೆಗಳ ನಿರ್ಮಾಣ, ಮದಗ ಮಾಸೂರಿನ ಕಾಲುವೆಗಳ ಆಧುನೀಕರಣ, ವರದಾ ನದಿಗೆ 10 ಬ್ರಿಡ್ಜ್/ಬ್ಯಾರೇಜ್ ನಿರ್ಮಾಣಗಳಿಗೆ ಅನುಮೋದನೆ ದೊರೆಯಿತು.

​ನಿಗಮದಲ್ಲಿ ಅವಶ್ಯವಿರುವ 138 ಕಾಮಗಾರಿಗಳ 306 ಕೋಟಿ ರೂ. ಅನುದಾನದ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಕಾಮಗಾರಿಗಳನ್ನು ವಿಭಾಗಿಸಿ, ಅತ್ಯಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಹಾಗೂ ಇನ್ನುಳಿದ ಕಾಮಗಾರಿಗಳನ್ನು ಮುಂದಿನ ಸಭೆಯಲ್ಲಿ ಅನುಮೋದನೆ ಪಡೆಯುವಂತೆ ಸಭೆಯಲ್ಲಿ ಸೂಚಿಸಲಾಯಿತು.

​ಕಾವೇರಿ ನೀರಾವರಿ ನಿಗಮ
​ಶಿಂಷಾ ಬ್ರ್ಯಾಂಚ್ ಕೆನಾಲ್ ಕಾಮಗಾರಿ, ಮಂಡ್ಯದಲ್ಲಿ ವಿಸಿ ಕೆನಾಲ್ ನೆಟ್‌ವರ್ಕ್, ಕಬಿನಿ ಕೆನಾಲ್‌ಗಳ ಆಧುನೀಕರಣ ಸೇರಿದಂತೆ 13 ಕಾಮಗಾರಿಗಳಿಗೆ 394 ಕೋಟಿ ರೂ.ಗಳ ಅನುದಾನಕ್ಕೆ ಸಭೆ ಅಂಗೀಕರಿಸಿತು.

​ಮೇಕೆದಾಟು ಇಎಫ್‌ಐಗೆ 2.71 ಕೋಟಿ ರೂ. ಅನುದಾನಕ್ಕೆ ಸಭೆ ಹಸಿರು ನಿಶಾನೆ ನೀಡಿತು.
​ಮೇಕೆದಾಟು ಯೋಜನೆ ಸಂಬಂಧ ಎಲ್ಲ ಸಂದೇಹಗಳನ್ನು ಬಗೆಹರಿಸಿದ್ದು, ಮುಳುಗಡೆಯಾಗಲಿರುವ 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಪರ್ಯಾಯವಾಗಿ ನೀಡಿರುವ ಭೂಮಿಗೆ ಡೀಮ್ಡ್ ಫಾರೆಸ್ಟ್ ನೀಡಲು ಈ ವಾರದೊಳಗೆ ನಿರ್ದೇಶನ ಬರಲಿದ್ದು, ಬಳಿಕ ನವೆಂಬರ್ ಅಂತ್ಯದೊಳಗೆ ಪರ್ಯಾಯ ಭೂಮಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ಸಭೆಯ ಗಮನ ಸೆಳೆದರು.

​ವಿಶ್ವೇಶ್ವರಯ್ಯ ಜಲ ನಿಗಮ
​ವಾಣಿವಿಲಾಸ ಸಾಗರ ಜಲಾಶಯದ ಕಾಲುವೆಗಳು ಹಳೆಯದಾಗಿದ್ದು, ಆಧುನೀಕರಣಕ್ಕೆ ಕೇಂದ್ರ ಸಚಿವರಿಗೆ ರೀ-ಪ್ರಪೋಸಲ್ ಸಲ್ಲಿಸುವಂತೆ ಸಭೆಯಲ್ಲಿ ಸಚಿವರು ಸೂಚನೆ ನೀಡಿದರು.

​ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಬಾಧಿತರಾಗಿರುವ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ಉಪ್ಪಿನಂಗಡಿ ಸಮೀಪದ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮದ ಬಳಿ ಕಿಂಡಿ ಅಣೆಕಟ್ಟು ನಿರ್ಮಿಸುವುದು, ಶೃಂಗೇರಿಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸುವುದು, ತರಿಕೆರೆ ಏತ ನೀರಾವರಿ ಮೂಲಕ 20 ಕೆರೆಗಳಿಗೆ ನೀರು ತುಂಬಿಸಲು ಹೆಚ್ಚುವರಿ ಪೈಪ್‌ಗಳ ಅಳವಡಿಕೆ, ಮೊಳಕಾಲ್ಮೂರು ಭಾಗದಲ್ಲಿ 5 ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಹತ್ತಾರು ಕಾಮಗಾರಿಗಳಿಗೆ ಸಭೆ ಅನುಮೋದನೆ ನೀಡಿತು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment