Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್
ರಾಜ್ಯ

ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 51 ವೀಕ್ಷಣೆಗಳು
eshwar khandre
eshwar khandre

ಗದಗ: ಬರದ ಹಿನ್ನೆಲೆಯಲ್ಲಿ, ವಿಬಿಜಿ ರಾಮ್‌ ಜಿ ಅಡಿ ಕೆಲಸದ ಗರಿಷ್ಠ ಮಿತಿ 50 ದಿನ ಹೆಚ್ಚಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಗದಗ ತಾಲೂಕು ಪಂಚಾಯತಿ ವ್ಯಾಪ್ತಿಯ ಅಡವಿ ಸೋಮಾಪುರ ಗ್ರಾಮ ಪಂಚಾಯತಿಯ ತಾಂಡಾ ರಸ್ತೆಯಲ್ಲಿರುವ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರೊಂದಿಗೆ ಅವರು ಚರ್ಚೆ ನಡೆಸಿದರು.

ಬರಗಾಲದ ಕಾರಣ ಗ್ರಾಮೀಣ ಜನರು ಕೆಲಸ ಅರಸಿ ವಲಸೆ ಹೋಗುವುದನ್ನು ತಡೆಯಲು ವಿಬಿಜಿ ರಾಮ್‌ಜಿ ಯೋಜನೆಯಡಿ ನಿರಂತರ ಕೆಲಸ ನೀಡಬೇಕಾಗಿದೆ. ಗ್ರಾಮೀಣ ಭಾಗದ ಪ್ರತಿ ಜಾಬ್‌ಕಾರ್ಡ್‌ಗೆ ಕೇಂದ್ರ ಸರಕಾರ ವರ್ಷಕ್ಕೆ125 ದಿನ ಕೆಲಸ ನಿಗದಿ ಪಡಿಸಿದೆ. ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಹಿತದೃಷ್ಟಿಯಿಂದ ಇನ್ನೂ 50 ದಿನ ಸೇರಿಸಿ ಪ್ರತಿ ಜಾಬ್‌ಕಾರ್ಡ್‌ಗೆ 175 ದಿನ ಕೆಲಸ ನೀಡಲು ಕೋರಿ ಪತ್ರ ಬರೆಯಲಾಗಿದೆ ಎಂದು ಕೂಲಿಕಾರರಿಗೆ ತಿಳಿಸಿದರು.

ಕಂದಕ ಬದು ಕೆಲಸ ನೀಡಿ:

ರೈತರು ಹಾಗೂ ಕೂಲಿಕಾರರಿಗೆ ಅವಶ್ಯವಾಗಿರುವ ಕಂದಕ ಬದು ಮಾಡಿಕೊಳ್ಳಲು ಅವಕಾಶ ನೀಡುವಂತೆ ರೈತರು ಮನವಿ ಮಾಡಿಕೊಂಡರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ನಂತರ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪೂರ್ಣಗೊಂಡ
ಕೃಷಿ ಹೊಂಡ ಕಾಮಗಾರಿಯ ಛಾಯಾಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಮಾಡಿಸಿಕೊಳ್ಳುವಂತೆ ಕೂಲಿಕಾರರಿಗೆ ತಿಳಿಸಿದರು.

ಡಿಜಿಟಲ್ ದಾಖಲೆ ಪತ್ರ ಹಸ್ತಾಂತರ: ಕರ್ನಾಟಕ ಸರ್ಕಾರದ ಭೂ ಗ್ಯಾರಂಟಿ ಯೋಜನೆಯಡಿ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಿತ್ಯ ಗ್ರಾಪಂ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳವಂತೆ ಸೂಚಿಸಿ ಸಾಂಕೇಂತಿಕವಾಗಿ ಇಬ್ಬರು ಫಲಾನುಭವಿಗಳಿಗೆ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವರಾದ ಮುಕುಲ್ ಜೈನ್, ಜಿಪಂ ಉಪ ಕಾರ್ಯದರ್ಶಿ ಅವರಾದ ಸಿ.ಆರ್. ಮುಂಡರಗಿ, ತಾಪಂ ಕಾರ್ಯನಿರ್ವಾಹ ಅಧಿಕಾರಿಯವರಾದ ಡಾ. ಎಚ್.ಎಸ್. ಜಿನಗಿ, ಸಹಾಯಕ ನಿರ್ದೇಶಕರಾದ ಕುಮಾರ ಪೂಜಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಲಮಾಣಿ ಇತರರಿದ್ದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8432 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment