Sunday, 29 November 2026 — Kannadavahini
BREAKING NEWS
ದೇಶ ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ Uncategorized ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್? ಮನರಂಜನೆ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ ರಾಜ್ಯ 19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ದೇಶ ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ Uncategorized ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್? ಮನರಂಜನೆ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ ರಾಜ್ಯ 19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ
Uncategorized

ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್?

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 87 ವೀಕ್ಷಣೆಗಳು
cm dk shivakumar

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು. ಆಶಾ ಕಾರ್ಯಕರ್ತೆಯರ ಗೌರವ ಧನ ಮಾಸಿಕ 2 ಸಾವಿರ ರೂ. ಹೆಚ್ಚಿಸಲಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗದೊಂದಿಗೆ ಮಾತುಕತೆ ನಡೆಸಿದ ಬಳಿಕ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಮುಂದಿನ ಜನವರಿ 1ರಿಂದ ಇದು ಅನುಷ್ಠಾನಕ್ಕೆ ಬರಲಿದೆ ಎಂದರು.

ಸಂಧಾನ ಯಶಸ್ವಿಯಾದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಕಳೆದ 12 ದಿನಗಳಿಂದ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಬೃಹತ್ ಪ್ರತಿಭಟನೆ ಹಿಂಪಡೆಯಲು ತೀರ್ಮಾನಿಸಲಾಗಿದೆ.

ಸಭೆಯ ಮಾಹಿತಿ ನೀಡಿದ ಸಿಎಂ, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಬೆಳಿಗ್ಗೆ ಕಳೆದ 12ದಿನಗಳಿಂದ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೌರವಧನದಲ್ಲಿ ಹೆಚ್ಚಳ ಮಾಡಲಾಗಿಲ್ಲ ಎಂಬುವುದು ಆಶಾ ಕಾರ್ಯಕರ್ತೆಯರ ಅಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಗೌರವಧನ ಹೆಚ್ಚಳಕ್ಕೆ ಒಪ್ಪಿಕೊಂಡಿದೆ ಎಂದರು.

ಪ್ರಸ್ತುತ ರಾಜ್ಯ ಸರ್ಕಾರ ರೂ. 5 ಸಾವಿರ ಕೆಂದ್ರ ಸರ್ಕಾರ ರೂ. 2ಸಾವಿರ ಗೌರವಧನ ನೀಡುತ್ತಿದ್ದು, ಕಾರ್ಯನಿರ್ವಹಣೆ ಆಧಾರದಲ್ಲಿ ಸರಾಸರಿ ರೂ.2ಸಾವಿರ ದಷ್ಟು ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನ ಕೇಂದ್ರ ಹಾಗೂ ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಹಂಚಿಕೆ ಮಾಡಬೇಕಿದ್ದರೂ, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನದಲ್ಲಿ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನೆ ಹಿಂತೆಗೆದುಕೊಳ್ಳುವ ಕುರಿತಾಗಿ ಇಂದು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ನಾವು ಗ್ಯಾರಂಟಿ ಕೊಟ್ಟ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೂ ನೀಡಿದ್ದೇವೆ. ಈಗ ಬೆಲೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗೌರವ ಧನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರವನ್ನು ಎಲ್ಲರೂ ಸಂತೋಷದಿಂದ  ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು ನಮ್ಮ ರಾಜ್ಯದ ಆಸ್ತಿ. ಅವರೆಲ್ಲರೂ ಹಳ್ಳಿ ಹಾಗೂ ನಗರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಿತಕ್ಕೆ ಅವರ ಸೇವೆ ಮುಂದುವರೆಯಲಿದೆ. ಕೆಲವರು ಆಶಾ ಕಾರ್ಯಕರ್ತೆಯರ ಹೋರಾಟವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೂ, ಅವರು ಬಗ್ಗಿಲ್ಲ. ಅವರ ಒಗ್ಗಟ್ಟು ಮುರಿಯಲು ಕೆಲವರು ಪ್ರಯತ್ನಿಸಿದರೂ, ಮುರಿಯಲು ಸಾಧ್ಯವಾಗಿಲ್ಲ ಎಂದರು.

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರೊಂದಿಗೆ ಗೌರವದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೆ. ಸರ್ಕಾರ ಅವರಿಗೆ ಗೌರವ ನೀಡಿದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಹೇಳಿದ್ದು, ಎಲ್ಲರೂ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8453 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment