Sunday, 29 November 2026 — Kannadavahini
BREAKING NEWS
ದೇಶ ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ Uncategorized ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್? ಮನರಂಜನೆ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ ರಾಜ್ಯ 19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ದೇಶ ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ Uncategorized ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್? ಮನರಂಜನೆ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ ರಾಜ್ಯ 19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ
ರಾಜ್ಯ

19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 64 ವೀಕ್ಷಣೆಗಳು
police

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಭಾರಿ ಪ್ರಮಾಣದ ವರ್ಗಾವಣೆ ಪ್ರಕ್ರಿಯೆ ನಡೆದಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 19 ಡಿವೈಎಸ್‌ಪಿ (ಸಿವಿಲ್) ಹಾಗೂ 82 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು (ಸಿವಿಲ್) ವರ್ಗಾವಣೆ ಮಾಡಿ ಪೊಲೀಸ್ ಪ್ರಧಾನ ಕಚೇರಿ ಆದೇಶ ಹೊರಡಿಸಿದೆ.

ಡಿಜಿ ಮತ್ತು ಐಜಿಪಿ ಕಚೇರಿಯಿಂದ ಹೊರಡಿಸಿರುವ ಆದೇಶದಂತೆ, ಅಧಿಕಾರಿಗಳಿಗೆ ವಿವಿಧ ಘಟಕಗಳು, ಪೊಲೀಸ್ ಠಾಣೆಗಳು ಹಾಗೂ ವಿಭಾಗಗಳಲ್ಲಿ ಹೊಸ ಸ್ಥಳ ನಿಯುಕ್ತಿ ಮಾಡಲಾಗಿದೆ. ಈ ವರ್ಗಾವಣೆಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ನಿಯೋಜಿತ ಸ್ಥಳಗಳಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.  ವರ್ಗಾವಣೆ ಆದೇಶದಲ್ಲಿ ಹೊಸ ಸ್ಥಳ ನಿಯುಕ್ತಿ ಮಾಡದ ಅಧಿಕಾರಿಗಳು ಮುಂದಿನ ಆದೇಶದವರೆಗೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಡಿವೈಎಸ್‌ಪಿಗಳ ವರ್ಗಾವಣೆ

19 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸ್ವಾಮಿ ಜಿ.ಟಿ. ಅವರನ್ನು ಸಿಐಡಿಯಿಂದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಉಪವಿಭಾಗಕ್ಕೆ ನಿಯೋಜಿಸಲಾಗಿದೆ. ಗುರುಶಾಂತಪ್ಪ ಕೆ.ವಿ. ಅವರನ್ನು ಶಿಗ್ಗಾಂವಿಯಿಂದ ಡಿಸಿಆರ್‌ಇಗೆ ವರ್ಗಾವಣೆ ಮಾಡಲಾಗಿದೆ.

ಶ್ರೀಧರ್ ಕೆ. ಪೂಜಾರ್ ಅವರನ್ನು ಆಂತರಿಕ ಭದ್ರತಾ ವಿಭಾಗದಿಂದ ಹುಬ್ಬಳ್ಳಿ ಗ್ರಾಮೀಣ ಉಪವಿಭಾಗಕ್ಕೆ, ಅನಿಲ್ ಕುಮಾರ್ ಹೆಚ್.ಆರ್. ಅವರನ್ನು ಲೋಕಾಯುಕ್ತದಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಉಪವಿಭಾಗಕ್ಕೆ ನಿಯೋಜಿಸಲಾಗಿದೆ.

ಕೇಶವ ಕೆ.ಇ. ಅವರನ್ನು ಶಿಕಾರಿಪುರದಿಂದ ಡಿಸಿಆರ್‌ಇಗೆ ವರ್ಗಾವಣೆ ಮಾಡಲಾಗಿದೆ. ದತ್ತಾತ್ರೇಯ ಅವರಿಗೆ ಬಳ್ಳಾರಿ ವಲಯದ ಐಜಿಪಿ ಕಚೇರಿಯಲ್ಲಿ ಸ್ಥಳ ನಿಯುಕ್ತಿ ಮಾಡಲಾಗಿದೆ. ಪುಷ್ಪಲತಾ ಎನ್. ಅವರನ್ನು ಸಿಐಡಿಗೆ ಹಾಗೂ ಪ್ರಶಾಂತ್ ಜಿ. ಮುನ್ನೋಳಿ ಅವರನ್ನು ಡಿಸಿಆರ್‌ಇಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ನಾಗರಾಜ ಎಂ.ಎನ್. ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ನರಸಿಂಹಮೂರ್ತಿ ಪಿ. ಅವರನ್ನು ಬೆಂಗಳೂರು ನಗರ ಕಮಾಂಡ್ ಸೆಂಟರ್‌ಗೆ ಹಾಗೂ ಜಾವೇದ್ ಇನಾಂದಾರ್ ಅವರನ್ನು ಯಾದಗಿರಿ ಜಿಲ್ಲೆಯ ಸಿಸಿಪಿಎಸ್‌ಗೆ ನಿಯೋಜಿಸಲಾಗಿದೆ.
ಸುನೀಲ್ ಕುಮಾರ್ ಬಿ. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಿಸಿಪಿಎಸ್‌ಗೆ, ಪ್ರಭುಗೌಡ ಕಿರೇದಳ್ಳಿ ಅವರನ್ನು ಹುಬ್ಬಳ್ಳಿ-ಧಾರವಾಡ ನಗರ ಸಿಸಿಪಿಎಸ್‌ಗೆ ವರ್ಗಾವಣೆ ಮಾಡಲಾಗಿದೆ.

ಗೀತಾ ಕುಲಕರ್ಣಿ, ಶ್ರೀನಿವಾಸ ರೆಡ್ಡಿ ಎನ್.ಟಿ. ಅವರನ್ನು ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ನಿಯೋಜಿಸಲಾಗಿದೆ. ಉಮಾದೇವಿ ಆರ್. ಅವರಿಗೆ ಬೆಂಗಳೂರು ಪಶ್ಚಿಮ ವಿಭಾಗದ ಗಿರಿನಗರ ಉಪವಿಭಾಗದಲ್ಲಿ, ರವಿಕುಮಾರ್ ಅವರಿಗೆ ಬೆಂಗಳೂರು ಕೇಂದ್ರ ವಿಭಾಗದ ಗಾಂಧಿನಗರ ಸಂಚಾರ ಉಪವಿಭಾಗದಲ್ಲಿ ಹೊಸ ಹುದ್ದೆ ನೀಡಲಾಗಿದೆ.

ತಬಾರಕ್ ಫಾತಿಮಾ ಅವರನ್ನು ಇಂದಿರಾನಗರ ಸಂಚಾರ ಉಪವಿಭಾಗಕ್ಕೆ ಹಾಗೂ ಸುಶೀಲ ಆರ್. ಅವರನ್ನು ಬೆಂಗಳೂರು ಪೂರ್ವ ವಿಭಾಗದ ಸಂಚಾರ ಉಪವಿಭಾಗಕ್ಕೆ ನಿಯೋಜಿಸಲಾಗಿದೆ.

82 ಪಿಐ ವರ್ಗಾವಣೆ:

ಇದೇ ವೇಳೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 82 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ಮೈಸೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಬೆಳಗಾವಿ, ಬಳ್ಳಾರಿ, ತುಮಕೂರು, ರಾಯಚೂರು, ಉತ್ತರ ಕನ್ನಡ, ಕೊಪ್ಪಳ, ಚಿಕ್ಕಮಗಳೂರು, ಗದಗ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.

ಬೆಂಗಳೂರು ನಗರದಲ್ಲಿಯೂ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಆಯಿಷಾ ಎಸ್. ಅವರನ್ನು ವೈಟ್‌ಫೀಲ್ಡ್ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ಹಾಗೂ ರೇಣುಕಾ ಜಿ.ಎಂ. ಅವರನ್ನು ವಿಕಾಸಸೌಧ ಭದ್ರತಾ ವಿಭಾಗಕ್ಕೆ ನಿಯೋಜಿಸಲಾಗಿದೆ.

ಮಂಜು ಹೆಚ್.ಎ., ಲಕ್ಷ್ಮಣ ಜಿ. ಅವರನ್ನು ಕೇಂದ್ರ ವಿಭಾಗದ ಪೊಲೀಸ್ ಕಂಟ್ರೋಲ್ ರೂಂಗೆ, ಲೋಕೇಶ್ ಡಿ. ಪಟೇಲ್ ಅವರನ್ನು ಪೂರ್ವ ವಿಭಾಗದ ಪೊಲೀಸ್ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಲಾಗಿದೆ.

ಗೌಡಪ್ಪನವರ ಕೆ. ಮತ್ತು ಮಂಜುನಾಥ ಡಿ.ಹೆಚ್. ಅವರನ್ನು ದಕ್ಷಿಣ ವಿಭಾಗದ ಪೊಲೀಸ್ ಕಂಟ್ರೋಲ್ ರೂಂಗೆ, ಮಂಜುನಾಥ ಅವರನ್ನು ಉತ್ತರ ವಿಭಾಗದ ಪೊಲೀಸ್ ಕಂಟ್ರೋಲ್ ರೂಂಗೆ ನಿಯೋಜಿಸಲಾಗಿದೆ.

ಮಂಜೇಗೌಡ ಎ.ಜಿ. ಹಾಗೂ ಸುಧೀರ್ ಹೆಚ್.ವಿ. ಅವರಿಗೆ ಪಶ್ಚಿಮ ವಿಭಾಗದ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಜವಾಬ್ದಾರಿ ನೀಡಲಾಗಿದೆ. ಸುಂದರ ಅವರನ್ನು ಪೂರ್ವ ವಿಭಾಗದ ಪೊಲೀಸ್ ಕಂಟ್ರೋಲ್ ರೂಂಗೆ ನಿಯೋಜಿಸಲಾಗಿದೆ.

ಇನ್ನು ಹಲವು ಇನ್‌ಸ್ಪೆಕ್ಟರ್‌ಗಳನ್ನು ಸಿಐಡಿ, ಕರ್ನಾಟಕ ಲೋಕಾಯುಕ್ತ, ಡಿಸಿಆರ್‌ಇ, ರಾಜ್ಯ ಗುಪ್ತವಾರ್ತೆ, ಆಂತರಿಕ ಭದ್ರತಾ ವಿಭಾಗ, ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಹಾಗೂ ವಿವಿಧ ಪೊಲೀಸ್ ತರಬೇತಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಎಲ್ಲ ಅಧಿಕಾರಿಗಳು ತಕ್ಷಣದಿಂದಲೇ ಹೊಸ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಪೊಲೀಸ್ ಪ್ರಧಾನ ಕಚೇರಿ ಸೂಚಿಸಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8453 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment