Sunday, 29 November 2026 — Kannadavahini
BREAKING NEWS
ದೇಶ ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ Uncategorized ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್? ಮನರಂಜನೆ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ ರಾಜ್ಯ 19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ದೇಶ ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ Uncategorized ಆಶಾ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಳ: ಸಿಎಂ ಡಿಕೆ ಸಂಧಾನ ಸಕ್ಸಸ್? ಮನರಂಜನೆ ಮ್ಯಾನೇಜರ್‌ಗೆ ಬೈದಿದ್ದು ನಿಜ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ ರಾಜ್ಯ 19 ಡಿವೈಎಸ್‌ಪಿ, 82 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ರಾಜ್ಯ ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿ ಪಾಲು ದೇಶ ದಿಢೀರ್ 3 ದಿನಗಳ ಸಂಸತ್ ಅಧಿವೇಶನ ಕರೆದ ಕೇಂದ್ರ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ
ದೇಶ

ಎನ್ ಡಿಎ ಹಾದಿ ಸುಗಮ: ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಡಿಎಂಕೆ, ಎನ್ ಸಿಪಿ ಬೆಂಬಲ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 58 ವೀಕ್ಷಣೆಗಳು
parliment

ನವದೆಹಲಿ: ನವೆಂಬರ್ 30ರಿಂದ ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿ ಮೂರು ಮಸೂದೆಗಳನ್ನು ಮಂಡಿಸಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದಾರಿ ಸಲೀಸಾಗಿದ್ದು, ಮಸೂದೆಗಳು ಪಾಸಾಗುವುದು ಬಹುತೇಕ ಖಚಿತವಾಗಿದೆ.

ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಬೆಂಬಲ ನೀಡಲು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಶರದ್ ಪವಾರ್ ಸಾರಥ್ಯದ ಎನ್ ಸಿಪಿ ಅಧಿಕೃತವಾಗಿ ಬೆಂಬಲ ಘೋಷಿಸಿದೆ. ಅಲ್ಲದೇ ಸಮಾಜವಾದಿ ಪಕ್ಷ ಕೂಡ ಬೆಂಬಲ ನೀಡುವ ಸಾಧ್ಯತೆ ಇದೆ.

ಈಗಾಗಲೇ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ವಿಭಜನೆಯಿಂದ 20 ಸಂಸದರ ಬೆಂಬಲ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ 7 ಸಂಸದರನ್ನು ಏಕನಾಥ್ ಶಿಂಧೆ ಬಣ ಸೆಳೆದುಕೊಳ್ಳುವ ಮೂಲಕ ಸಂಖ್ಯಾ ಬಲ ಹೆಚ್ಚಿಸಿಕೊಂಡಿದ್ದ ಎನ್ ಡಿಎಗೆ ಇದೀಗ ಡಿಎಂಕೆ ಮತ್ತು ಎನ್ ಸಿಪಿ ಬೆಂಬಲವೂ ದೃಢಪಟ್ಟಿದ್ದರಿಂದ ಮಸೂದೆಗಳು ಪಾಸಾಗುವುದು ಬಹುತೇಕ ದೃಢಪಟ್ಟಿದೆ.

543 ಸದಸ್ಯ ಬಲದ ಲೋಕಸಭೆಯಲ್ಲಿ ಮಸೂದೆ ಪಾಸಾಗಬೇಕಾದರೆ ಕನಿಷ್ಠ 360 ಮತಗಳು ಬೇಕು. ಎಲ್ಲಾ ಸದಸ್ಯರು ಅಧಿವೇಶನಕ್ಕೆ ಹಾಜರಾಗಿ ಮತ ಚಲಾಯಿಸಿದರೆ 360 ಮತಗಳು ಬೇಕು. ಒಂದು ವೇಳೆ ಸಂಸದರು ಗೈರು ಹಾಜರಾದರೆ ಇದ್ದರೆ ಒಟ್ಟು ಮತದಾನದಲ್ಲಿ ಮೂರನೇ ಎರಡು ಭಾಗದಷ್ಟು ಮತಗಳು ಬೇಕಾಗಿವೆ. ಆದರೆ ಬಿಜೆಪಿ ನೇತೃತ್ವದ ಎನ್‌ ಡಿಎ ಬಳಿ ಇರುವುದು 320 ಸದಸ್ಯರ ಬಲ. ಕಳೆದ ಬಾರಿ ಮಹಿಳಾ ಮೀಸಲು ವಿಧೇಯಕ ಮಂಡಿಸಿದಾಗ ಪರವಾಗಿ 298 ಹಾಗೂ ವಿರುದ್ಧವಾಗಿ 230 ಮತಗಳು ಬಿದ್ದಿದ್ದವು.

ಇದೀಗ ಡಿಎಂಕೆಯ 20. ಟಿಎಂಸಿಯ 20, ಶಿವಸೇನೆಯ 7 ಮತ್ತು ಎನ್ ಸಿಪಿಯ 8 ಸಂಸದರು ಬೆಂಬಲ ದೊರೆತಿದ್ದು, ಬಹುಮತಕ್ಕೆ ಅಗತ್ಯವಾದ 360ಕ್ಕಿಂತ ಅಧಿಕ ಸಂಖ್ಯಾಬಲ ಸಾಧಿಸಿದೆ ಎಂದು ಹೇಳಲಾಗಿದೆ. ಆದರೆ ಮಸೂದೆ ಮಂಡನೆಯಾದಾಗ ಎಷ್ಟು ಮತಗಳು ಬೀಳುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.

ದಕ್ಷಿಣ ಭಾರತದ ಪ್ರಾತಿನಿಧ್ಯ ಯಥಾಸ್ಥಿತಿ

ಕೇಂದ್ರ ಸರ್ಕಾರ ಮಹಿಳಾ ಮಸೂದೆಯನ್ನು ಜಾರಿಗೆ ತರಲು ಇರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಒಂದೊಂದೆ ಹೆಜ್ಜೆ ಇಟ್ಟಿದೆ. ಕ್ಷೇತ್ರ ಪುನರ್ ವಿಂಗಡಣೆಗೆ ಕ್ಷೇತ್ರ ಬಿಟ್ಟುಕೊಡಲು ಪುರುಷ ಸಂಸದರು ಒಪ್ಪದೇ ಇರುವುದು ಹಾಗೂ ದಕ್ಷಿಣ ಭಾರತದ ರಾಜ್ಯಗಳು ತಮ್ಮ ಪ್ರಾತಿನಿಧ್ಯ ಕಡಿಮೆ ಆಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ.

ಇದೀಗ ಕೇಂದ್ರ ಸರ್ಕಾರ 1971ರ ಜನಗಣತಿ ಆಧಾರದ ಮೇಲೆ ರಾಜ್ಯಗಳು ಹಾಗೂ ಲೋಕಸಭೆಯ ಸ್ಥಾನಗಳ ಸ‍ಂಖ್ಯೆಯಲ್ಲಿ ಶೇ.50ರಷ್ಟು ಹೆಚ್ಚಿಸುವುದು, 131ನೇ ಸಾಂವಿಧಾನಿಕ ತಿದ್ದುಪಡಿ ಪ್ರಕಾರ 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳ ಗಡಿಯನ್ನು ಮರುವಿಂಗಡಿಸುವುದು ಹಾಗೂ ಮೂರನೇಯದು 132ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರು ವಿಂಗಡಣಾ ಪ್ರಕ್ರಿಯೆ ಜಾರಿಗೊಳಿಸುವುದು ಆಗಿದೆ.

ಇದರಿಂದ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾಪವೂ ಇದೆ. ರಾಜ್ಯಗಳಿಗೆ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 35 ಸ್ಥಾನಗಳವರೆಗೆ ಹೆಚ್ಚಿಸಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗುವುದು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8453 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment