ಭಾರತೀಯ ಸೇನೆಯ ಇಂಜಿನಿಯರ್ ಗಳು 72 ಗಂಟೆಗೂ ಕಡಿಮೆ ಅವಧಿಯಲ್ಲಿ ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಸಂಪರ್ಕ ಸಾಧಿಸಿದ್ದಾರೆ.
ಗ್ಯಾಂಗ್ಟಕ್ ನಲ್ಲಿ ಡಿಕ್ಚು-ಸಂಕ್ಲಗ್ ನಡುವೆ ಭಾರತೀಯ ಸೇನೆಯ ತ್ರಿಶಕ್ತಿ ಕ್ರಾಪ್ಸ್ ತಂಡ 72 ಗಂಟೆಗಳ ಕಡಿಮೆ ಅವಧಿಯಲ್ಲಿ ಕಡಿತಗೊಂಡಿದ್ದ ಸಂಪರ್ಕವನ್ನು ಸೇತುವೆ ಮೂಲಕ ಮರು ಸಾಧಿಸಿದ್ದಾರೆ.
ಸ್ಥಳೀಯ ಆಡಳಿತ ಹಾಗೂ ಗಡಿ ರಸ್ತೆ ನಿರ್ಮಾಣ ಸಂಸ್ಥೆ ನೆರವಿನೊಂದಿಗೆ ಭಾರತೀಯ ಸೇನೆ ಜೂನ್ 23ರಂದು ಸೇತುವೆ ನಿರ್ಮಾಣ ಆರಂಭಿಸಿದ್ದು, ಕೇವಲ 72 ಗಂಟೆಗಳಲ್ಲಿ ನಿರ್ಮಿಸಿದ್ದಾರೆ.
ಪ್ರವಾಹದಿಂದಾಗಿ ಸಿಕ್ಕಿಂನ ಹಲವಾರು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ತುರ್ತು ಸೇತುವೆ ನಿರ್ಮಾಣಕ್ಕೆ ಭಾರತೀಯ ಸೇನೆಯ ನೆರವು ಕೋರಲಾಗಿತ್ತು. ಸತತ ಮಳೆ ಹಾಗೂ ತಾಂತ್ರಿಕ ಸಮಸ್ಯೆಗಳ ನಡುವೆಯೂ ಯೋಧರು 72 ಗಂಟೆಯೊಳಗೆ ಸೇತುವೆ ನಿರ್ಮಿಸಿ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದರು.
ಈ ಸೇತುವೆ ನಿರ್ಮಾಣದಿಂದ ವಾಹನಗಳು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸಬಹುದಾಗಿದ್ದು, ವೈದ್ಯಕೀಯ ಹಾಗೂ ಆಹಾರ ಸಾಮಾಗ್ರಿಗಳ ಪೂರೈಕೆಗೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.