ಭಾರತ ವಿರುದ್ಧದ ತವರಿನ ಸರಣಿಗೂ ಮುನ್ನವೇ ಸ್ಪಿನ್ನರ್ ವಹಿಂದು ಹಸರಂಗ ಶ್ರೀಲಂಆ ಟಿ-20 ತಂಡದ ನಾಯಕ ಸ್ಥಾನ ತ್ಯಜಿಸಿದ್ದಾರೆ.
ಶ್ರೀಲಂಕಾ ಟಿ-20 ತಂಡದ ನಾಯಕನಾಗಿ 6 ತಿಂಗಳ ಕಾಲ ಮುನ್ನಡೆಸಿದ ವಹಿಂದು ಹಸರಂಗ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತ್ತು. ಟಿ-20 ವಿಶ್ವಕಪ್ ನಲ್ಲಿ ತಂಡ ಸೂಪರ್-8 ತಲುಪಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಹಿತಾಸಕ್ತಿಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹಸರಂಗ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಸರಂಗ ಈ ತೀರ್ಮಾನ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ.