ಜರ್ಮನಿಗೆ ಸದ್ದಿಲ್ಲದೇ ಅಮೆರಿಕ ಕ್ಷಿಪಣಿಗಳನ್ನು ರವಾನಿಸುವ ಮೂಲಕ ಶೀತಲ ಸಮರದ ಆರಂಭದ ಸುಳಿವು ನೀಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ನಡೆದ ನ್ಯಾಟೋ ಸಭೆಯಲ್ಲಿ ಟೊಮಾಹ್ವಾಕ್ ನಂತಹ ದೂರಗಾಮಿ ಕ್ಷಿಪಣಿಗಳನ್ನು ಜರ್ಮನಿಯಲ್ಲಿ ಸಂಗ್ರಹಿಸಲು ತೀರ್ಮಾನಿಸಿದೆ.
ಜರ್ಮನಿಯಲ್ಲಿ ಅತ್ಯಾಧುನಿಕ ದೂರಗಾಮಿ ಕ್ಷಿಪಣಿಗಳನ್ನು ಸಂಗ್ರಹಿಸುವ ಮೂಲಕ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ತೆರೆಮರೆಯ ಯುದ್ಧಕ್ಕೆ ಸಜ್ಜಾಗುತ್ತಿರುವ ಸೂಚನೆ ನೀಡಿದೆ ಎಂದು ರಷ್ಯಾ ಪ್ರಕಟಣೆಯಲ್ಲಿ ಎಚ್ಚರಿಸಿದೆ.
ಶೀತಲ ಸಮರ ಎದುರಿಸಲು ನಾವು ಹಂತ ಹಂತವಾಗಿ ಹೆಜ್ಜೆ ಇಡುತ್ತಿದ್ದೇವೆ ಎಂದು ಕ್ರಿಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.
ಅಮೆರಿಕದ ಈ ನಡೆಯಿಂದ ರಷ್ಯಾ ಉಕ್ರೇನ್ ನಿಂದ ತನ್ನ ಎಲ್ಲಾ ಸೇನೆಯನ್ನು ವಾಪಸ್ ಪಡೆಯಲು ಪರೋಕ್ಷ ಸೂಚನೆ ನೀಡಿದೆ ಎಂದು ಡಿಮಿಟ್ರಿ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ತನ್ನ ನೆರೆಯ ಉಕ್ರೇನ್ ಮೇಲೆ ದಾಳಿ ನಡೆಸುವ ಮೂಲಕ ಶಾಂತಿ ಕದಡಿದೆ. ಇದು ಮುಂದಿನ ಹಂತ ತಲುಪುವ ಮುನ್ನ ನಾವು ಪಾಶ್ಚಿಮಾತ್ಯ ರಾಷ್ಟ್ರಗಳ ರಕ್ಷಣೆಗೆ ಸಿದ್ಧತೆ ಆರಂಭಿಸುವುದು ಸೂಕ್ತ ಎಂದು ನ್ಯಾಟೊ ರಾಷ್ಟ್ರಗಳು ಸಭೆಯಲ್ಲಿ ತೀರ್ಮಾನ ಕೈಗೊಂಡಿವೆ ಎಂದು ಹೇಳಲಾಗಿದೆ.