Thursday, November 21, 2024
Google search engine
Homeತಾಜಾ ಸುದ್ದಿಮದುವೆ ದಿನ ಅರೆಸ್ಟ್ ಆಗಿದ್ದ ಆದಿವಾಸಿ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!

ಮದುವೆ ದಿನ ಅರೆಸ್ಟ್ ಆಗಿದ್ದ ಆದಿವಾಸಿ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!

ಮದುವೆ ದಿನ ಬಂಧನಕ್ಕೊಳಗಾಗಿದ್ದ ಆದಿವಾಸಿ ಯುವಕ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದ್ದು, ಕುಟುಂಬದ ಸದಸ್ಯರು ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ದೇವಾ ಪಡ್ರಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರು ಕಲೆಕ್ಟರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಪೊಲೀಸರು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಆದರೆ 25 ವರ್ಷದ ಯುವಕ ಚೆನ್ನಾಗಿದ್ದು, ಮದುವೆಗೆ ಸಜ್ಜಾಗಿರುವಾಗ ಹೇಗೆ ಹೃದಯಾಘಾತದಿಂದ ಸಾಯುತ್ತಾನೆ ಎಂದು ಪ್ರಶ್ನಿಸಿದ್ದಾರೆ.

ಸಾಯುವ ಹಿಂದಿನ ದಿನ ದೇವಾ ಜೊತೆ ಆತನ ಮತ್ತೊಬ್ಬ ಸಂಬಂಧಿಯನ್ನು ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿದ್ದು, ರಾತ್ರಿ 4.30ರ ಸುಮಾರಿಗೆ ಕುಟುಂಬದ ಸದಸ್ಯರ ಜೊತೆ ಕೊನೆಯ ಬಾರಿಗೆ ಫೋಟೊ ತೆಗೆಸಿಕೊಂಡಿದ್ದ. ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ನಂತರ ದೂರವಾಣಿ ಕರೆ ಮಾಡಿ ಸತ್ತಿರುವ ವಿಷಯ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments