Wednesday, 28 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ತಾಜಾ ಸುದ್ದಿ

SHOCKING: ತಂಗಿ ಮನೆಗೆ ಹೋಗ್ತಿನಿ ಅಂದ ತಂಗಿ ಮನೆಗೆ ಹೋಗ್ತಿನಿ ಅಂದ ಪತ್ನಿಯನ್ನು ಬೈಕ್ ಹಿಂದೆ ಕಟ್ಟಿ ದರದರನೆ ಎಳೆದೊಯ್ದ ಪಾಪಿ ಪತಿ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 4 ವೀಕ್ಷಣೆಗಳು

ತಂಗಿ ಮನೆಗೆ ಹೋಗ್ತೀನಿ ಅಂತ ಹೇಳಿದ್ದಕ್ಕೆ ಪತ್ನಿಯನ್ನು ಬೈಕ್ ಹಿಂದೆ ಕಟ್ಟಿ ದಾರಿಯಲ್ಲಿ ದರದರನೆ ಎಳೆದೊಯ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಕಚ್ಛಾ ರಸ್ತೆಯಲ್ಲಿ ಪತ್ನಿಯ ಕಾಲುಗಳನ್ನು ಕಟ್ಟಿ ಬೈಕ್ ನಲ್ಲಿ ಎಳೆದೊಯ್ಯಲಾಗುತ್ತಿದ್ದು, ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿರುವ ಹೃದಯವಿದ್ರಾವಕ ಘಟನೆ ನಾಗ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಬೈಕ್ ನಲ್ಲಿ ಕೆಲವು ಮೀಟರ್ ದೂರ ಎಳೆದೊಯ್ದ ಪತಿ ನಂತರ ಬೈಕ್ ನಿಲ್ಲಿಸಿ ಆಕೆಯ ಮುಂದೆ ಧಿಮಾಕಿನಿಂದ ಸೊಂಟದ ಮೇಲೆ ಕೈ ಇಟ್ಟುಕೊಂಡು ನೋಡುತ್ತಿದ್ದಾನೆ. ಆಗ ಮಹಿಳೆ ಆತನ ಕಾಲಿಗೆ ಬಿದ್ದು ಗೋಗರೆದಿದ್ದಾಳೆ.

ಈ ಭಯಾನಕ ವೀಡಿಯೋ 40 ಸೆಕೆಂಡ್ ಗಳಾಗಿದ್ದು, ತಿಂಗಳ ಹಿಂದೆ ಚಿತ್ರೀಕರಿಸಿರಬಹುದು ಎಂದು ಶಂಕಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದ ಈ ವೀಡಿಯೋ ಇದೀಗ ವೈರಲ್ ಆಗಿದ್ದು ಎಲ್ಲೆಡೆ ತೀವ್ರ ಆಕ್ರೋಶ ಕೇಳಿ ಬಂದಿದೆ.

ಘಟನೆ ನಡೆಯುವಾಗ ಮಹಿಳೆ ಸೇರಿದಂತೆ ಕನಿಷ್ಠ ಮೂವರು ಇದ್ದರೂ ಯಾರೂ ಆಕೆಯ ನೆರವಿಗೆ ಬಂದಿಲ್ಲ. ಅಲ್ಲದೇ ಗ್ರಾಮದ ಯಾರೂ ಕೂಡ ಸಹಾಯಕ್ಕೆ ಬಾರದೇ ಇರುವುದು ಆಘಾತಕಾರಿಯಾಗಿದೆ.

ಮೂಲಗಳ ಪ್ರಕಾರ ಆತ ಆಕೆಯ ಪತಿಯಾಗಿದ್ದು, ನೆರೆಯ ರಾಜ್ಯದಲ್ಲಿ ಖರೀದಿ ಮಾಡಿದ ಪತ್ನಿ ಆಗಿದ್ದಾಳೆ ಎಂದು ಹೇಳಲಾಗಿದೆ. ಜೈಸ್ಲಾಮರ್ ನಲ್ಲಿರುವ ತಂಗಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಪತ್ನಿ ಹೇಳಿದ್ದಕ್ಕೆ ಈ ರೀತಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.

ಪ್ರೇಮ್ ರಾಮ್ ಮೇಘಾವಲ್ ಎಂಬಾತ ಈ ಕೃತ್ಯ ಎಸಗಿದ್ದು, ಡ್ರಗ್ಸ್ ವ್ಯಸನಿಯಾಗಿದ್ದ ಈತ ನಿರುದ್ಯೋಗಿಯಾಗಿದ್ದು, 2 ಲಕ್ಷ ರೂ. ನೀಡಿ ಈಕೆಯನ್ನು ಮದುವೆ ಆಗಲು ಖರೀಸಿದ್ದ.

ರಾಜಸ್ಥಾನದಲ್ಲಿ ಮಹಿಳೆಯರ ಖರೀದಿ ಮತ್ತು ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಖರೀದಿಸಿ ವ್ಯಕ್ತಿಯನ್ನು ಪತಿ ಎಂದು ಭಾವಿಸಿ ಆತ ಹೇಳಿದ ಎಲ್ಲಾ ಕೆಲಸ ಮಾಡಬೇಕು. ಇವರನ್ನು ಜೀತದಾಳಿನಂತೆ ನೋಡಿಕೊಂಡು ಕೆಲಸಕ್ಕೆ ಕಳುಹಿಸಿ ಅವರ ವೇತನದಲ್ಲಿ ಜೀವನ ಸಾಗಿಸುವವರೂ ಇದ್ದಾರೆ ಎಂದು ಹೇಳಲಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment