Thursday, June 11, 2026
Google search engine
Homeಜಿಲ್ಲಾ ಸುದ್ದಿಧ್ವಜಾರೋಹಣ ನಡೆದ ಧ್ವಜಸ್ತಂಭದಿಂದ ಬಿದ್ದು ಬಾಲಕ ಸಾವು

ಧ್ವಜಾರೋಹಣ ನಡೆದ ಧ್ವಜಸ್ತಂಭದಿಂದ ಬಿದ್ದು ಬಾಲಕ ಸಾವು

ಸ್ವಾತಂತ್ರ್ಯ ದಿನಾಚರಣೆಯಂದು 3ನೇ ತರಗತಿ ವಿದ್ಯಾರ್ಥಿ ಧ್ವಜಸ್ತಂಭದಿಂದ ಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಕುಷ್ಟಗಿಯ ಕಳಮಳ್ಳಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ತಾಂಡಾದ ನಿವಾಸಿ ಪ್ರಕಾಶ ಅವರ ಪುತ್ರ ಸೋಮನಾಥ ಚವ್ಹಾಣ್ (9) ಎಂದು ಗುರುತಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಶಿಕ್ಷಕರು ಶಾಲೆಯ ಗೇಟ್ ಹಾಕಿ ತೆರಳಿದ್ದರು. ಬಳಿಕ ವಿದ್ಯಾರ್ಥಿಯು ಸ್ಥಳೀಯ ಬಾಲಕರೊಂದಿಗೆ ಕಾಂಪೌಂಡ್ ಹಾರಿ ಆಟವಾಡಲು ಶಾಲೆಯ ಮೈದಾನಕ್ಕೆ ತೆರಳಿದ್ದ ಎನ್ನಲಾಗಿದೆ.

ಧ್ವಜಸ್ತಂಭವನ್ನು ಏರಿದ್ದ ಬಾಲಕ ಕಂಬದ ಮೇಲೆ ಇದ್ದ ಕಟ್ಟಿಗೆ ಹಿಡಿದು ಕೊಂಡಿದ್ದ. ಕಟ್ಟಿಗೆ ಮುರಿದು ಕೆಳಗೆ ಬಿದ್ದ ಬಾಲಕನನ್ನು ಸ್ಥಳೀಯರು ತಾವರಗೇರಾ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಾವರಗೇರಾ ಆಸ್ಪತ್ರೆಯಲ್ಲಿ ವೈದರು ಇಲ್ಲವೆಂದು ಕುಷ್ಟಗಿ ಆಸ್ಪತ್ರೆಗೆ ತರಲಾಗಿತ್ತು. ಆದರೆ ಪರಿಶೀಲಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ತಂದೆ ತಾಯಿ ದುಡಿಯಲು ಗುಳೆ ಹೋಗಿದ್ದು ಬಾಲಕ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದಿದೆ. ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಕೆಲವರು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಿದ್ದು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಈ ಕುರಿತು ಮಾಹಿತಿ ನೀಡಿದ ತಾವರಗೇರಾ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್ ನಾಗರಾಜ ಕೋಟಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments