Wednesday, August 5, 2026
Google search engine
Homeಜಿಲ್ಲಾ ಸುದ್ದಿಯಾದಗಿರಿಯಲ್ಲಿ ಕೆಮಿಕಲ್ ಸೋರಿಕೆ: ಮೂವರು ಕಾರ್ಮಿಕರ ದುರ್ಮರಣ

ಯಾದಗಿರಿಯಲ್ಲಿ ಕೆಮಿಕಲ್ ಸೋರಿಕೆ: ಮೂವರು ಕಾರ್ಮಿಕರ ದುರ್ಮರಣ

ಯಾದಗಿರಿ:  ಕೆಮಿಕಲ್ ಸೋರಿಕೆಯಿಂದ ಮೂವರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಗುರುಮಠಕಲ್ ತಾಲೂಕಿನ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೆಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಸಿಲ್ ಲ್ಯಾಬೋರೇಟರೀಸ್ ಪ್ರೈ.ಲಿಮಿಟೆಡ್ ಹೆಸರಿನ ರಾಸಾಯಿನಿಕ ಕಂಪನಿಯಲ್ಲಿ ಕೆಮಿಕಲ್ ಸೋರಿಕೆಯಿಂದಾಗಿ ಮೂರು ಕಾರ್ಮಿಕರು ಉಸಿರು ಗಟ್ಟಿ ದಾರುಣವಾಗಿ ಮೃತಪಟ್ಟಿದ್ದಾರೆ. ಸತ್ತವರಲ್ಲಿ ಇಬ್ಬರು ಉತ್ತರ ಭಾರತದವರು, ಒಬ್ಬ ತೆಲಂಗಾಣದವನು ಎಂದು ತಿಳಿದು ಬಂದಿದೆ.

ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಇಬ್ಬರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಎಸ್ ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಕೈಗಾರಿಕೆಗಳ ಬೇಜವಾಬ್ದಾರಿ, ಸುರಕ್ಷತಾ ನಿರ್ಲಕ್ಷ್ಯ ಮತ್ತು ಆಡಳಿತದ ವೈಫಲ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲ್ಲೆ ಈ ದುರ್ಘಟನೆ ಸಂಭವಿಸಿದೆ ಎಂಬುವುದು ಸ್ಥಳೀಯರ ಆರೋಪವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments