Sunday, September 20, 2026
Google search engine
Homeಮನರಂಜನೆಶೇ.2ರಷ್ಟು ಸೆಸ್ ಹೇರಿಕೆ: ಸೆ.30ರಿಂದ ಸಿನಿಮಾ ಟಿಕೆಟ್ ದುಬಾರಿ?

ಶೇ.2ರಷ್ಟು ಸೆಸ್ ಹೇರಿಕೆ: ಸೆ.30ರಿಂದ ಸಿನಿಮಾ ಟಿಕೆಟ್ ದುಬಾರಿ?

ಬೆಂಗಳೂರು: ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಹೆಚ್ಚುವರಿ ಸೆಸ್ (ಉಪಕರ) ವಿಧಿಸಲಾಗಿದ್ದು, ಹೊಸ ನಿಯಮವು ಸೆಪ್ಟೆಂಬರ್ 30 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ರಾಜ್ಯ ಸರ್ಕಾರವು 2024 ರಲ್ಲಿ ಮಂಡಿಸಿದ್ದ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.

ಈ ಮಸೂದೆಗೆ 2024ರ ಸೆಪ್ಟೆಂಬರ್ 23 ರಂದು ಕರ್ನಾಟಕದ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಿದ್ದರು. ಅದರ ಮರುದಿನವೇ, ಅಂದರೆ ಸೆಪ್ಟೆಂಬರ್ 24 ರಂದು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದೀಗ ಎರಡು ವರ್ಷಗಳ ಸುದೀರ್ಘ ಪ್ರಕ್ರಿಯೆಯ ಬಳಿಕ ಈ ಅಧಿನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಟಿಕೆಟ್ ದರ ಎಷ್ಟು ದುಬಾರಿ?

ಹೊಸ ನಿಯಮದ ಪ್ರಕಾರ, ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡುವ ಗ್ರಾಹಕರು ಟಿಕೆಟ್ ದರದ ಜೊತೆಗೆ 2% ಸೆಸ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, 200 ರೂಪಾಯಿ ಮುಖಬೆಲೆಯ ಟಿಕೆಟ್‌ಗೆ ಹೆಚ್ಚುವರಿಯಾಗಿ 4 ರೂಪಾಯಿ ಸೆಸ್ ಕಟ್ಟಬೇಕು.

ಸಿನಿಮಾ ಟಿಕೆಟ್ ಮೂಲಕ ಸಂಗ್ರಹವಾಗುವ ಈ ಸೆಸ್ ಹಣವನ್ನು ಕೇವಲ ಸಿನಿಮಾ ಕಾರ್ಮಿಕರ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಗಾಗಿ ಮಾತ್ರ ಬಳಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments