Thursday, May 14, 2026
Google search engine
Homeಜಿಲ್ಲಾ ಸುದ್ದಿಸಾವಿನಲ್ಲೂ ಒಂದಾದ ದಂಪತಿ: ಊಟ ಮಾಡುತ್ತಲೇ ಹಾರಿಹೋಯ್ತು ಇಬ್ಬರ ಜೀವ!

ಸಾವಿನಲ್ಲೂ ಒಂದಾದ ದಂಪತಿ: ಊಟ ಮಾಡುತ್ತಲೇ ಹಾರಿಹೋಯ್ತು ಇಬ್ಬರ ಜೀವ!

ಊಟ ಮಾಡುತ್ತಿದ್ದಾಗ ಪತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ನೋಡಿ ಆಘಾತಕ್ಕೆ ಒಳಗಾದ ಪತ್ನಿ ಕೂಡ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ನಡೆದಿದೆ.

ಈಶ್ವರಪ್ಪ(79) ಮತ್ತು ಪಾರ್ವತವ್ವಾ(74) ಸಾವಿನಲ್ಲೂ ಒಂದಾದ ದಂಪತಿ.

ಭಾನುವಾರ ರಾತ್ರಿ 10 ಗಂಟೆ ಇಬ್ಬರೂ ಕುಳಿತು ಊಟ ಮಾಡಿದ್ದರು. ಆಗ ಏಕಾಏಕಿ ಈಶ್ವರಪ್ಪಗೆ ಹೃದಯಾಘಾತವಾಗಿ ಮೃತಪಟ್ಟರು. ಇದನ್ನು ನೋಡಿದ ಪತ್ನಿ ಪಾರ್ವತವ್ವಾ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.

ದಂಪತಿ ನಾಲ್ಕು ಮಕ್ಕಳು, 12 ಮೊಮ್ಮಕ್ಕಳನ್ನು ಅಗಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾವಂತೂರು ಗ್ರಾಮದಲ್ಲಿ ಕೂಡ ಕಳೆದ ವರ್ಷ ಜನವರಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಹೊಳೆಯಪ್ಪ (90) ಎಂಬವರು ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ವಿಷಯ ತಿಳಿದು ಪತ್ನಿ 84ರ ಗಂಗಮ್ಮ ಹೃದಯಾಘಾತದಿಂದ ಅಸು ನೀಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments